Posts

ಪಕ್ಕದ ಮನೆಯವರಿಂದ ಮೂರು ಪವನಿನ‌ ಕರಿಮಣಿ ಸರದೊಂದಿಗೆ ತೆರಳಿದ ಮಹಿಳೆ ನಾಪತ್ತೆ

0 min read


ಬೆಳ್ತಂಗಡಿ; ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ನಲ್ಲಿ ಸಕ್ರೀಯವಾಗಿದ್ದ ಗೃಹಿಣಿಯೊಬ್ಬಳು ಪಕ್ಕದ ಮನೆಯವರಿಗೆ ಮೂರು ಪವನಿನ ಚಿನ್ನದ ಸರ ಸಮೇತ ಇದೀಗ ನಾಪತ್ತೆಯಾಗಿದ್ದಾರೆ .

ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದು ನಂತರ ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವುದಾಗಿ ಬೆಳ್ತಂಗಡಿ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಮಹಿಳೆಯನ್ನು ಮೇಲಂತಬೆಟ್ಟು ಗ್ರಾ.ಪಂ ವ್ಯಾಪ್ತಿಯ ಮುಂಡೂರು ನಿವಾಸಿನಿ ಶಿಲ್ಪಾ ಎಂದು ಗುರುತಿಸಲಾಗಿದೆ.

ಮಗುವನ್ನು ಅತ್ತೆಯ ಮನೆಯಲ್ಲೇ ಬಿಟ್ಟು ಅಕ್ಟೊಬರ್ 20 ರಂದು ಕೆಲಸಕ್ಕೆಂದು ಹೋದಾಕೆ ಮತ್ತೆ ಮನೆಗೆ ವಾಪಾಸ್ಸಾಗಲಿಲ್ಲ.

ಊರಿನಲ್ಲಿರುವ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದು ಇದೀಗ ತಲೆಮರೆಸಿಕೊಂಡಿರುವುದರಿಂದ ಉಳಿದ ಸದಸ್ಯರಿಗೆ ಸಾಲದ ಹೊರೆ ಹಂಚಿಕೆಯಾಗಿದೆ.

ಸದ್ಯ ಈಕೆ ಮಂಡ್ಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇನ್ನಷ್ಟು ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment