Posts

ಸೋಜಾ ಇಲೆಕ್ಟ್ರಾನಿಕ್ಸ್ ಏಂಡ್ ಫರ್ನಿಚರ್ಸ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಬೃಹತ್ ಮಾರಾಟ ಮೇಳ


ಬೆಳ್ತಂಗಡಿ; ಇಲೆಕ್ಟ್ರಾನಿಕ್ಸ್,  ಫರ್ನಿಚರ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ತಾಲೂಕಿನ ಅತ್ಯಂತ ಹಿರಿಯ ನಂಬಿಕಸ್ತ ಮಳಿಗೆ 'ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ತಂಗಡಿ' ಯಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ ‌ಭರ್ಜರಿ ಮಾರಾಟ ಮೇಳ ಆರಂಭವಾಗಿದೆ.

ಕಳದ 26 ವರ್ಷಗಳಿಂದ ಬೆಳ್ತಂಗಡಿ ಕೇಂದ್ರಿತವಾಗಿ ವ್ಯವಹಾರ ನಡೆಸಿಕೊಂಡು ತಾಲೂಕಿನ 81 ಗ್ರಾಮಗಳಲ್ಲಲ್ಲದೆ ಆಸುಪಾಸಿನ ತಾಲೂಕುಗಳ ಗ್ರಾಹಕರ ವಿಶೇಷ ಮನ್ನಣೆಗೆ ಪಾತ್ರವಾಗಿರುವ ಸೋಜಾ ಇಲೆಕ್ಟ್ರಾನಿಕ್ಸ್ ನಲ್ಲಿ ಈ ಬಾರಿ ಹಬ್ಬದ ಸಂಭ್ರಮ ಇಮ್ಮಡಿಗೊಳ್ಳುವಂತಹಾ ಬೃಹತ್ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಲಾಗಿದೆ.

ಪ್ರಖ್ಯಾತ ಕಂಪೆನಿಗಳ ಉತ್ಪನ್ನಗಳ ವಿಶ್ವಾಸಾರ್ಹ ವಿಕ್ರಯ;

ಸೋಜಾ ಇಲೆಕ್ಟ್ರಾನಿಕ್ ಮಳಿಗೆಯಲ್ಲಿ ಪ್ರಖ್ಯಾತ ಕಂಪೆನಿಗಳಾದ ವೀಡಿಯಂ, ಐಎಫ್‌ಬಿ, ಹೇವೆಲ್ಸ್, ಸೂರ್ಯ ಪ್ಯಾನ್ಸ್, ಕವಿರಾಜ, ಸೇಮ್ಸಂಗ್, ಇಂಪೆಕ್ಸ್, ಸೋನಿ, ಪೇನಸೋನಿಕ್, ಪ್ರಿಸ್ಟೇಜ್, ವರ್ಲ್‌ಫೂಲ್, ಬೋಶ್, ಹೈಯರ್, ಎಲ್‌ಜಿ, ಇತ್ಯಾಧಿ ಕಂಪೆನಿಗಳ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ.

ವಿಶಾಲವಾದ ಸ್ಥಳದಲ್ಲಿ ಇಲೆಕ್ಟ್ರಾನಿಕ್ಸ್, ಫರ್ನಿಚರ್ಸ್ ಮತ್ತು ಪ್ಯೂರ್ ಅಲ್ಯೂಮಿನಿಯಂ ಪಾತ್ರೆಗಳು, ಕಂಪನಿ ವಾಚ್‌ಗಳು, ತೌಫೀಕ್ ಗ್ರೈಂಡರ್, ನೀಲ್ ಕಮಲ್ ಮೊದಲಾದ ಕಂಪೆನಿಯ ಕುರ್ಚಿಗಳು, ಡ್ಯೂರೋಫ್ಲೆಕ್ಸ್, ಕರ್ಲೋನ್ ಮೊದಲಾದ ಬ್ರಾಂಡೆಡ್ ಬೆಡ್ಡ್ ಗಳು, ಮಾರಾಟ ವ್ಯವಸ್ಥೆ ಇದೆ. ಡೋರ್ ಡೆಲಿವರಿ ವ್ಯವಸ್ಥೆಯೂ ಇದೆ.



'0' ಡೌನ್ ಪೇಮೆಂಟ್;.

ಬಜಾಜ್ ಫೈನಾನ್ಸ್ ಸಂಸ್ಥೆಯ ವತಿಯಿಂದ '0' ರೂಪಾಯಿ ಡೌನ್ ಪೇಮೆಂಟ್ ನಲ್ಲಿ ಸ್ಥಳದಲ್ಲೇ ವಸ್ತುಗಳನ್ನು ಖರೀದಿಸುವ ಸುಲಭ ಸಾಲ ಸೌಲಭ್ಯ ವ್ಯವಸ್ಥೆ ಇದೆ. ದೀಪಾವಳಿಯ ಹೊಚ್ಚ ಹೊಸತನಕ್ಕಾಗಿ ಗೃಹೋಪಯೋಗಿ ಹಳೆಯ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೊಸದರೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವೂ ಇದೆ. 

24*7 ಕಸ್ಟಮರ್ ಸರ್ವಿಸ್;

ಗ್ರಾಹಕರ ಅನುಕೂಲಕ್ಕಾಗಿ ಸೈಫ್ ಕಾರ್ಡ್ ಪೇಮೆಂಟ್ ವ್ಯವಸ್ಥೆ ಅಳವಡಿಸಲಾಗಿದೆ. ಗೂಗಲ್ ಪೇ, ಫೋನ್ ಪೇ ಸರಳ ಪಾವತಿ ವಿಧಾನವೂ ಇದೆ. ಆನ್ಲೈನ್ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ, ಕಂಪ್ಲೈಂಟ್ ಅಥವಾ ಸರ್ವಿಸ್‌ಗಾಗಿ  ಯಾವತ್ತೂ ಬೇಕಾದರೂ ನೇರ ಭೇಟಿ ಮಾಡಿ ಪರಿಹಾರ ಮಾಡಿಕೊಳ್ಳಬಹುದಾದ ವಿಶ್ವಾಸ ವ್ಯಕ್ತಪಡಿಸುತ್ತಿದೆ. 

ಅಪೂರ್ವ ವ್ಯಕ್ತಿತ್ವದ ಸಂಸ್ಥೆಯ ಪಾಲುದಾರ ಅಲ್ಫೋನ್ಸ್ ಫ್ರಾಂಕೋ;

ಸಂಸ್ಥೆಯ ಹಿರಿಯ ಪಾಲುದಾರ ಅಲ್ಫೋನ್ಸ್ ಫ್ರಾಂಕೋ ಅವರು ನಿವೃತ್ತ ಶಿಕ್ಷಕರಾಗಿದ್ದು ಆಕರ್ಷಕ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ.

ಭಾರತ ಸೇವಾದಲ ಕೇಂದ್ರ ಸ್ಥಾಯಿ ಸಮಿತಿ ಸದಸ್ಯರೂ, ರಾಷ್ಟ್ರ ಧ್ವಜದ ತರಬೇತುದಾರರೂ, ಸರಕಾರಿ ಅಂಗೀಕೃತ ಅಧಿಕೃತ ರಾಷ್ಟ್ರ ಧ್ವಜದ ಮಾರಾಟಗಾರರೂ ಆಗಿರುವ ಫ್ರಾಂಕೋ ಅವರು ರಾಷ್ಟ್ರೀಯ ಮಟ್ಟದ ಸಂಘಟಕರೂ ಆಗಿ ಗುರುತಿಸಲ್ಪಟ್ಟಿದ್ದಾರೆ. ಸರ್ವ ಧರ್ಮೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಮತ್ತು ಸೌಹಾರ್ದಯುತವಾಗಿ ಪಾಲುಗೊಳ್ಳುತ್ತಾ ಗ್ರಾಹಕರ ಭಾವನೆ ಮತ್ತು ನಾಡಿಮಿಡಿತ ಅರಿತಿರುವ ಅವರೆ ಮಳಿಗೆಯಲ್ಲಿ ಲಭ್ಯರಿದ್ದು ಸ್ವತಃ ಗ್ರಾಹಕರನ್ನು ನೇರ ಭೇಟಿಯಾಗಿ ಪ್ರೀತಿ‌ಗಳಿಸುತ್ತಿದ್ದಾರೆ.

ದೀಪಾವಳಿಯ ಬೆಳಕು ಈ‌ಬಾರಿ ಎಲ್ಲರ ಮೊಗದಲ್ಲೂ ಮೂಡಲಿ ಎಂದು ಆಶಿಸುವ ಅವರು ಎಲ್ಲಾ ಗ್ರಾಹಕರನ್ನು ತಮ್ಮ ಮಳಿಗೆಯತ್ತ ಕೈಬೀಸಿ ಕರೆಯುತ್ತಿದ್ದಾರೆ. ನಗುಮೊಗದ ಸಿಬ್ಬಂದಿಗಳು ಗ್ರಾಹಕರ ಸೇವೆಗೆ ಸದಾ ಸನ್ನದ್ದರಾಗಿದ್ದಾರೆ. ಕುಟುಂಬದೊಂದಿಗೆ ನಿಮ್ಮ ನೆಚ್ಚಿನ‌ ಸೋಜಾ ಇಲೆಕ್ಟ್ರಾನಿಕ್ಸ್ ಸಂಸ್ಥೆಗೆ ಒಮ್ಮೆ ಭೇಡಿ ನೀಡಿ, ವೀಕ್ಷಿಸಿ ನಿಮ್ಮ ಮನಸಿಗೊಪ್ಪುವ ವಸ್ತುಗಳನ್ನು ಖರೀದಿಸಿ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official