Posts

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ, ಶಿಕ್ಷಣ ನಿಧಿ ವಿತರಣೆ

1 min read

ನಾರಾಯಣ ಎಸ್ ಮಯ್ಯರಿಗೆ ಗುರುನಮನ

ಬೆಳ್ತಂಗಡಿ: ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ವತಿಯಿಂದ ದಾನಿಗಳ ಸಹಕಾರದೊಂದಿಗೆ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಸೆ.5ರಂದು ಕ್ರೀಡಾ ಸಂಘದ ಸಭಾಭವನದಲ್ಲಿ ಜರಗಿತು.




ಓರ್ವೆ ಪದವಿ ವಿದ್ಯಾರ್ಥಿನಿಯನ್ನು ಶೈಕ್ಷಣಿಕ ದತ್ತು ತೆಗೆದುಕೊಂಡಿರುವ ಲಯನ್ಸ್ ಕ್ಲಬ್ ಅಧ್ಯಕ್ಷ ಹೇಮಂತ ರಾವ್ ಅವರ ಪರವಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್ ವಲಯಾಧ್ಯಕ್ಷ, ಶ್ರದ್ದಾ ಎಂಟರ್ ಪ್ರೈಸಸ್ ಮಾಲಿಕ ವಸಂತ ಶೆಟ್ಟಿ ಮಾತನಾಡಿ, ಚಿಂತನೆಗಳ ಜತೆ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡಬೇಕು. ಶೈಕ್ಷಣಿಕ ಅವಧಿಯಲ್ಲಿ ಸಹಕಾರ ನೀಡಿದವರನ್ನು ಎಂದೂ ಮರೆಯಬಾರದು. ಎಲ್ಲರಲ್ಲೂ ಪ್ರತಿಭೆ ಇದೆ ಇದು ಹೊರಹೊಮ್ಮಲು ವೇದಿಕೆಗಳ ಅಗತ್ಯವಿದೆ. ಅಂತಹಾ ಅವಕಾಶ ನೀಡುವಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಚೂಣಿಯಲ್ಲಿದೆ ಎಂದರು. 

ಇನ್ನೋರ್ವ ಮುಖ್ಯ ಅತಿಥಿ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಜಿತ್ ಭಿಡೆ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಚಿಂತೆ ಮಾಡುವ ಬದಲು ಈಗಿನಿಂದಲೇ ಭವಿಷ್ಯದ ಬಗ್ಗೆ ಚಿಂತಿಸಿ ಯಾವ ಶಿಕ್ಷಣ ಪಡೆದರೆ ಉತ್ತಮ ಎಂದು ಯೋಚಿಸಿ ಮುಂದುವರಿಯಬೇಕು. ಯಾವುದೇ ಸಣ್ಣ ಉದ್ಯೋಗ ಸಿಕ್ಕಿದರೂ ಪ್ರಾಮಾಣಿಕವಾಗಿ ದುಡಿದು ಸಿಕ್ಕ ಅವಕಾಶವನ್ನು ಉಪಯೋಗಿಸಿ ಎಲ್ಲರಿಂದಲೂ ಗುರುತಿಸಲ್ಪಡುವಂತಾಗಬೇಕು ಎಂದರು.

ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಅಧ್ಯಕ್ಷತೆ ವಹಿಸಿದ್ದರು.

ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ, ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ರಂಜಿನಿ, ಉದ್ಯಮಿಗಳಾದ ಪ್ರಹ್ಲಾದ ಫಡ್ಕೆ, ಅರೆಕಲ್ಲು ರಾಮಚಂದ್ರ ಭಟ್, ಡಾ.ಶಿವಾನಂದ ಸ್ವಾಮಿ, ಮುಂಡಾಜೆ ಸಹಕಾರಿ ಸಂಘದ ನಿರ್ದೇಶಕಿ ಸುಮನಾ ಗೋಖಲೆ ಶುಭಹಾರೈಸಿದರು.

ಒಟ್ಟು 8 ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅತಿಥಿಗಳೇ ಪ್ರಾಯೋಜಿಸಿದ ಸಹಾಯಧನ ವಿತರಿಸಲಾಯಿತು. ತುಕಾರಾಮ‌ ಬಂಗೇರ, ಅಮೃತಾ ಅರೆಕ್ಕಲ್, ಮಧುರಾ ಗೋಖಲೆ ಅವರೂ ಪ್ರಾಯೋಜಕತ್ವ ನೀಡಿದರು. ಡಾ. ಶಿವಾನಂದ ಸ್ವಾಮಿ ಅವರು ಪ್ರಾಯೋಜಿಸಿದ ಮೊತ್ತದಲ್ಲಿ ಸ್ಥಳೀಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಕೋಶಾಧಿಕಾರಿ ವಿಜಯಾ ಆರ್,  ಉಪಾಧ್ಯಕ್ಷ ಪುಷ್ಪರಾಜ್, ನಿರ್ದೇಶಕರಾದ ಪ್ರವೀಣ್ ಪೂಜಾರಿ, ಕೃಷ್ಣಪ್ಪ, ಲಾರೆನ್ಸ್, ಆಡಿಟರ್ ಸಚಿನ್ ಹೆಬ್ಬಾರ್,ಸುರೇಶ್ ಮುಂಡಾಲೊಟ್ಟು ಇವರು ಸಹಕರಿಸಿದರು.

ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಮಂಜೂಷ್ ನಾಯಕ್ ಹಾಗೂ ನಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿಗಳಾದ ಸಾಂತಪ್ಪ ಸ್ವಾಗತಿಸಿ, ಶಶಿಧರ್ ಠೋಸರ್ ನಿರೂಪಿಸಿದರು. ನಿರ್ದೇಶಕ ನಾರಾಯಣ ಪೂಜಾರಿ ವಂದಿಸಿದರು.

ಗುರುನಮನ

ಶಿಕ್ಷಕರ‌ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, 

ಇತ್ತೀಚೆಗೆ ನಿಧನರಾದ ಮುಂಡಾಜೆಯ ನಿವೃತ್ತ ಶಿಕ್ಷಣ ಸಂಯೋಜಕ ನಾರಾಯಣ ಎಸ್ ಮಯ್ಯ ಅವರಿಗೆ, ಅವರ ವಿದ್ಯಾರ್ಥಿ ಹಾಗೂ ನಿವೃತ್ತ ರೇಷ್ಮೆ ಅಧಿಕಾರಿಯಾಗಿರುವ ಬಾಬು ಪೂಜಾರಿ ಕೂಳೂರು ಗುರುನಮನ ಸಲ್ಲಿಸಿ, ಮಯ್ಯ ಅವರ ಶಿಸ್ತು, ಧಾರ್ಮಿಕ ಮತ್ತು ಸಮಯಪ್ರಜ್ಞೆ, ಕಲೆಯ ಬಗ್ಗೆ ಇದ್ದ ಕಳಕಳಿಯಯನ್ನು ಸ್ಮರಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment