ಬೆಳ್ತಂಗಡಿ; ಕಳೆದ ಎರಡು ವರ್ಷಗಳಿಂದ ಮುಂಡಾಜೆ ಬದ್ರಿಯಾ ಜುಮ್ಮಾ ಮಸ್ಜಿದ್ ಮತ್ತು ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ವ್ಯಾಪ್ತಿಯ ಎಲ್ಲಾ ಕುಟುಂಬಗಳಿಗೆ ನೆರವಾಗುವ ರೀತಿಯಲ್ಲಿ ಜನಪರ ಸಾಮಾಜಿಕ ಕಾರ್ಯ, ಆರ್ಥಿಕ ಸಹಕಾರ ನೀಡುತ್ತಾ ಬರುತ್ತಿರುವ ಮುಂಡಾಜೆ ಹೆಲ್ಪ್‌ಲೈನ್ ವಾಟ್ಸ್ ಆಪ್ ಗ್ರೂಪ್ ವತಿಯಿಂದ ಉಭಯ ಜಮಾಅತ್ ಗೆ ಸುಮಾರು 80,000\ ವೆಚ್ಚದಲ್ಲಿ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು
ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಜಮಾಅತ್ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಸದರ್ ಶರೀಫ್ ಮುಸ್ಲಿಯಾರ್, ಕೋಶಾಧಿಕಾರಿ ಹಂಝ ಬಿಎಮ್‌ಎ, ಜೊತೆ ಕಾರ್ಯದರ್ಶಿ ಇಬ್ರಾಹಿಂ, ಜಮಾಅತ್ ಪ್ರಮುಖರಾದ ಅಬ್ಬಾಸ್ ಕುರುಡ್ಯ, ಹಸನ್‌ಕುಂಞಿ ಚೆನ್ನಿಗುಡ್ಡೆ, ಹರ್ಷದ್, ನೌಶಾದ್ ಕೂಳೂರು, ರಫೀಕ್ ಕುರುಡ್ಯ, ಅನ್ವರ್ ಮುಂಡಾಜೆ, ಅಶ್ರಫ್ ಮುಂಡಾಜೆ ಮತ್ತು ಅನ್ಸಾಫ್ ಮುಂಡಾಜೆ ಉಪಸ್ಥಿತರಿದ್ದು ಕೊಡುಗೆ ಸ್ವೀಕರಿಸಿದರು.ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಖತೀಬ್ ಉನೈಸ್ ಸಖಾಫಿ, ಜಮಾಅತ್ ಅಧ್ಯಕ್ಷ ಹಮೀದ್ ನೆಕ್ಕರೆ, ಮಸ್ಲಕ್ ಟ್ರಸ್ಟ್ ಕಮಿಟಿ ಕಾರ್ಯಾಧ್ಯಕ್ಷ ಹಾಜಬ್ಬ, ಪ್ರ.ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಜಮಾಅತ್ ಪ್ರಮುಖರಾದ ಅಬೂಬಕ್ಕರ್ ಕೂಳೂರು, ರಮ್ಲ ನೆಕ್ಕರೆ, ಮುಸ್ತಫಾ ಮಾಗುಂಡಿ, ಎಸ್ಸೆಸ್ಸೆಫ್ ಶಾಖೆ ಉಪಾಧ್ಯಕ್ಷ ಸಿದ್ದೀಕ್ ನೆಕ್ಕರೆ, ಹೆಲ್ಪ್‌ಲೈನ್ ಮುಂಡಾಜೆ ಸಂಯೋಜಕರಲ್ಲೋರ್ವರಾದ ಸಿದ್ದೀಕ್ ಸಾಗರ್, ಮದರಸ ಎಸ್‌ಬಿಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕೊಡುಗೆ ಪಡೆದುಕೊಂಡರು.
ಈ ಕೊಡುಗೆಯ ಪೈಕಿ ಒಂದು ಯಂತ್ರದ ಪೂರ್ತಿ 40 ಸಾವಿರ ರೂ.ಮೊತ್ತವನ್ನು ಉಸ್ಮಾನ್ ಹಾಜಿ ಕಲ್ಲಾಜೆ ಮತ್ತು ಅವರ ಮಕ್ಕಳು ದೇಣಿಗೆ ನೀಡಿದ್ದು, ಉಳಿದಂತೆ ಉಭಯ ಜಮಾಅತ್ ಗಳವರು ಧನಸಹಾಯ ನೀಡಿದ್ದಾರೆ.