Posts

ತಾಲೂಕಿನ ಒಟ್ಟು ನಾಲ್ವರು ಶಿಕ್ಷಕರಿಗೆ ರಾಜ್ಯ, ಜಿಲ್ಲಾ ಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ

1 min read

ಎಡ್ವರ್ಡ್ ಡಿಸೋಜಾ(ರಾಜ್ಯಮಟ್ಟ)

ಬೆಳ್ತಂಗಡಿ; ಡಾ.‌ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಆಚರಿಸುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಡಮಾಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ಮೂರು ಮಂದಿ ಶಿಕ್ಷಕರು  ಆಯ್ಕೆಯಾಗಿದ್ದಾರೆ ಎಂದು ಶನಿವಾರ ಬಿಡುಗಡೆಯಾಗಿರುವ ಇಲಾಖಾ ಪತ್ರದಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ತಿಳಿಸಿದ್ದಾರೆ.

ಅಜಿತ್ ಕುಮಾರ್ ಕೊಕ್ರಾಡಿ(ಪ್ರೌಢ)

ಜೊತೆಗೆ ಬೆಳ್ತಂಗಡಿ ತಾಲೂಕಿನ ಓರ್ವ ಶಿಕ್ಷಕನಿಗೆ ರಾಜ್ಯ ಮಟ್ಟದ ಅತ್ತುತ್ತಮ ಶಿಕ್ಷಕ ಪ್ರಶಸ್ತಿಯೂ ಬಂದಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ.


ಅಮಿತಾನಂದ ಹೆಗ್ಡೆ ಬಂಗಾಡಿ(ಹಿ.ಪ್ರಾ)

ಬೆಳ್ತಂಗಡಿ ತಾಲೂಕಿನ ಕಟ್ಟದಬೈಲು ಸರಕಾರಿ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಎಡ್ವರ್ಡ್ ಡಿಸೋಜಾ ಅವರೇ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು. ಅಂತೆಯೇ ಜಿಲ್ಲಾ ಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿಗೆ ಪ್ರೌಢ ಶಾಲಾ ವಿಭಾಗದಿಂದ ಸರಕಾರಿ ಪ್ರೌಢ ಶಾಲೆ ಗೇರುಕಟ್ಟೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ, ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಬಂಗಾಡಿ ಸರಕಾರಿ ಹಿ.ಪ್ರಾ ಶಾಲಾ ಶಿಕ್ಷಕ ಅಮಿತಾನಂದ ಹೆಗ್ಡೆ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಳ್ಳುಕಳ್ಳು ಇಲ್ಲಿನ‌  ಸಹಶಿಕ್ಷಕ ಪಿ ಶಿವಾನಂದ ಭಂಡಾರಿ ಇವರು ಆಯ್ಕೆಯಾಗಿದ್ದಾರೆ.




ಪಿ ಶಿವಾನಂದ ಭಂಡಾರಿ(ಕಿ.ಪ್ರಾ)

ಶೈಕ್ಷಣಿಕ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅಮೋಲಾಗ್ರ ಸೇವೆ, ಶಾಲಾ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಪೋಷಕರು, ಊರವರ ಜೊತೆ ಸಮನ್ವಯ ಸಾಧಿಸಿ ಮಾದರಿ ಕಾರ್ಯಗಳನ್ನು ಅನಿಷ್ಠಾನಿಸಿರುವುದು ಹಾಗೂ ಕಲಿಕೆ ಮತ್ತು ಫಲಿತಾಂಶ ಇತ್ಯಾಧಿಯಾಗಿ ಈ ಶಿಕ್ಷಕರುಗಳ ಕ್ರಿಯಾತ್ಮಕ ಚಟುವಟಿಕೆಗಳನ್ನು ಗುರುತಿಸಿ‌ ಅವರನ್ನು ಈ ಗೌರವಯುತ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment