ಬೆಳ್ತಂಗಡಿ: ರಾಜ್ಯಾದ್ಯಂತ ಕೋವಿಡ್ ಪ್ರಕರಣದ ಜೊತೆಗೆ ರೂಪಾಂತರಿತ ಒಮೈಕ್ರೋನ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಾರದ ಶುಕ್ರವಾರದಿಂದಲೇ ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಗೊಳಿಸಲು ತೀರ್ಮಾನಕ್ಕೆ ಬರಲಾಗಿದೆ.
ಆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ.
ರಾಜ್ಯದಾದ್ಯಂತ ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಕರ್ಫ್ಯೂ, ಬೆಂಗಳೂರಿನಲ್ಲಿ ಮಾತ್ರ ಶಾಲೆಗಳು ಬಂದ್, ಡಿಗ್ರಿ ಹಾಗೂ ಇತರ ತರಗತಿಗಳಿಗೆ ರಜೆ,
10 ಮತ್ತು 12 ನೇ ತರಗತಿಗಳು ಮಾತ್ರ ನಡೆಯಲಿದೆ, ವೈದ್ಯಕೀಯ ವಿಭಾಗ ಮೆಡಿಕಲ್ ಹಾಗೂ ಪ್ಯಾರಾಮೆಡಿಕಲ್ ತರಗತಿಗಳು ಎಂದಿನಂತೆ ನಡೆಯಲಿವೆ,ಹೊರಾಂಗಣ ಮದುವೆಗೆ 200 ಜನ, ಒಳಾಂಗಣ ಮದುವೆಗೆ 100 ಜನ, ಅಂತ್ಯಕ್ರಿಯೆಗೂ ಮಿತಿ, ಹೋಟಲ್ ಪಬ್ ಬಾರ್ ಸಿನಿಮಾಗೆ ಶೇ 50ರಷ್ಟು ಅವಕಾಶ, ಪ್ರತಿಭಟನೆ ರಾಲಿಗೆ ಅವಕಾಶವಿಲ್ಲ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಕ್ಕೂ ನಿರ್ಬಂಧ, ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ, ಮೆಟ್ರೋ, ಬಸ್, ಸಾರ್ವಜನಿಕ ಸಂಚಾರದ ಬಗ್ಗೆ ಶೀಘ್ರವೇ ನಿಯಮ ರೂಪಿಸಲಾಗುವುದು ಎಂದು ಸಿ.ಎಂ ತಿಳಿಸಿದರು.