Posts

ಸೋಮಂತಡ್ಕದಲ್ಲಿ "ಟ್ರಿಮ್ ಇನ್" ಮೆನ್ಸ್ ಸಲೂನ್ ಶುಭಾರಂಭ

1 min read



ಮುಂಡಾಜೆ: ಸೋಮಂತಡ್ಕ ಪೇಟೆಯ ಡಿಸೋಜಾ ಕಾಂಪ್ಲೆಕ್ಸ್ ನಲ್ಲಿ, ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿ "ಟ್ರಿಮ್ ಇನ್" ಮೆನ್ಸ್ ಸಲೂನ್ (ಮೆನ್ಸ್ ಬ್ಯೂಟಿ ಪಾರ್ಲರ್) ಶುಭಾರಂಭಗೊಂಡಿತು.

ಸಯ್ಯಿದ್ ಕಾಜೂರು ತಂಙಳ್ ನೂತನ ಸಂಸ್ಥೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಯ್ಯಿದ್ ಬೆಳಾಲ್ ತಂಙಳ್, ಸಯ್ಯಿದ್ ವಾದಿ ಇರ್ಫಾನ್ ತಂಙಳ್ ಆಶೀರ್ವಾದಗೈದರು.

ಈ ವೇಳೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಖತೀಬ್ ಉನೈಸ್ ಸಖಾಫಿ ನರಿಮೊಗರು, ಸಹಾಯಕ ಉಸ್ತಾದ್ ಅಬ್ದುಲ್ ಜಲೀಲ್ ಸಖಾಫಿ, ಬದ್ರಿಯಾ ಜುಮ್ಮಾ ಮಸ್ಜಿದ್ ಖತೀಬ್ ಹಮೀದ್ ದಾರಿಮಿ, ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಖತೀಬ್ ಎಸ್.ಹೆಚ್ ಮುಹಮ್ಮದ್ ಮುಸ್ತಫಾ ಸ‌ಅದಿ, ಸಹಾಯಕ ಉಸ್ತಾದ್ ಶಫೀಕ್ ಹಿಮಮಿ, ಕೆ‌.ಯು ಮುಹಮ್ಮದ್ ಸಖಾಫಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಉಸ್ಮಾನ್ ಎಂ.ಕೆ, ಸಯ್ಯಿದಲಿ ಹಾಜಿ, ಕೆರೀಂ ಕೆ‌.ಎಸ್, ಅಹಮದ್ ಕುಂಞಿ ನೆಕ್ಕರೆ, ಕಟ್ಟಡದ ಮಾಲಕ ಡಿಸೋಜಾ ಮೊದಲಾದವರು ಭಾಗಿಯಾಗಿದ್ದರು.



ನೂತನ ಸಂಸ್ಥೆಗೆ ಮಿಲ್ಕ್ ಸೊಸೈಟಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ,   ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ್ ರಾವ್ , ಅಗರಿ ರಾಮಣ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಹೊಸಗದ್ದೆ, ಉಮೇಶ್ ಆಚಾರ್ಯ, ಹಂಝ ಬಿಎಮ್‌ಎ,  ಸಿದ್ದೀಕ್ ಸಾಗರ್ ,  ಮೋಣಾಕ ಕುರುಡ್ಯ, ಮೋಣಾಕ‌ ಜೈ ಭಾರತ್, ಅಬ್ರಹಾಂ, ಜೋಸ್ ಮೊದಲಾದವರು ಭೇಟಿ ನೀಡಿ ಪ್ರೋತ್ಸಾಹಿಸಿದರು.

ಸಂಸ್ಥೆಯ ಮಾಲಿಕರಾದ ಬಶೀರ್ ನೆಕ್ಕರೆ, ಅವರ ತಂದೆ ಹಮೀದ್ ನೆಕ್ಕರೆ, ಸಹೋದರರಾದ ಸಿದ್ದೀಕ್ ನೆಕ್ಕರೆ ಮತ್ತು ಸಫ್ವಾನ್ ನೆಕ್ಕರೆ ಇವರು ಆಹ್ವಾನಿತ ಗಣ್ಯರನ್ನು ಬರಮಾಡಿಕೊಂಡು ಗೌರವಿಸಿದರು. 

ನೂತನ ಮೆನ್ಸ್ ಬ್ಯೂಟಿ ಪಾರ್ಲರ್‌ನಲ್ಲಿ ಅನುಭವಿ ಕೇಶ ವಿನ್ಯಾಸಕಾರರಿಂದ ಪುರುಷರಿಗೆ ಕೇಶ ವಿನ್ಯಾಸ, ಫೇಸ್ & ಹೇರ್ ಮಸಾಜ್,‌ ನೇಚುರಲ್ ಮೆಹೆಂದಿ, ಹೇರ್ ಡೈ, ಹೇರ್ ಸ್ಟ್ರೈಟ್ ನಿಂಗ್, ಫೇಸ್ ಮಸಾಜ್, ಹೀಟ್ ಥೆರಪಿ,  ಮದುವೆ ಇನ್ನಿತರ ಪಾರ್ಟಿಗಳಿಗೆ  ಮಧುಮಗನಿಗೆ ‌ಹಾಗೂ ಇತರರಿಗೆ ಮುಖವರ್ಣಿಕೆಯ ವಿಶೇಷ ಪತ್ಯೇಕ ಪೇಕೇಜ್‌ಗಳು ಮಿತದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದು ಎಲ್ಲರ ಸಹಕಾರ ಕೋರಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment