Posts

ಮೂರು ಕೊಲೆ ಪ್ರಕರಣ ಬೇಧಿಸಲು ಕಾರಣವಾಗಿದ್ದ ಪೊಲೀಸ್ ನಾಯಿ "ಸುಧಾ" ಕೊನೆಯುಸಿರು ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ


ಬೆಳ್ತಂಗಡಿ: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ವಿಭಾಗದಲ್ಲಿ (ಕ್ರೈ ಸೆಕ್ಷನ್ ನಲ್ಲಿ) ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಲವಾರು ಪ್ರಕರಣಗಳ ಪತ್ತೆಗೆ ಪೊಲೀಸರಿಗೆ ಮಹತ್ವದ ಮಾಹಿತಿ ಒದಗಿಸಿಕೊಟ್ಟಿದ್ದ ಪೊಲೀಸ್ ಶ್ವಾನ "ಸುಧಾ"  ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟ ಘಟನೆ ನಡೆದಿದೆ.



"ಸುಧಾ" ಕಳೆದ ಮೂರು ದಿನಗಳಿಂದ  ಅನಾರೋಗ್ಯದಿಂದ ಬಳಲುತ್ತಿದ್ದು  ಜುಲೈ 24 ರಂದು ಬೆಳಿಗ್ಗೆ 10 ಗಂಟೆಗೆ ಕೊನೆಯುಸಿರೆಳೆಯಿತು.

ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯ ಲ್ಲಿ ಸೇವೆ ಸಲ್ಲಿಸಿದ್ದ "ಸುಧಾ" ಅಪರಾಧ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿತ್ತು. ಅದರ ತ್ವರಿತ ಮತ್ತು ನಿಖರ ಮಾಹಿತಿಯಾಧರಿಸಿ


3 ಕೊಲೆ ಪ್ರಕರಣ ಹಾಗೂ 5 ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಯಶ ಸಾಧಿಸಿತ್ತು.

ಮಂಗಳೂರು ಪೊಲೀಸ್ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳೂರು ಕಮೀಷನರ್ ಶಶಿಕಾಂತ್ ಅವರ ಉಪಸ್ಥಿತಿಯಲ್ಲಿ ಪೊಲೀಸ್ ಡಾಗ್  ಅಂತ್ಯಕ್ರಿಯೆ ನಡೆಸಲಾಯಿತು. ಕಮಿಷನರ್ ಸಹಿತ ಉನ್ನತ ಅಧಿಕಾರಿಗಳು ಪಾರ್ಥಿವ ಶರೀರಕ್ಕೆ ಅಂತಿಮ ಪೊಲೀಸ್ ಗೌರವ ಸಲ್ಲಿಸಿದರು.


ಇದುವರೆಗೆ ಸದ್ರಿ ಶ್ವಾನವನ್ನು ಅತ್ಯುತ್ತಮ ರೀತಿಯಲ್ಲಿ ಪಳಗಿಸಿ, ಸೂಕ್ತ ರೀತಿಯಲ್ಲಿ ಸಲಹುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಕೈ ಹಿಡಿದು ಸಂತೈಸಿದ ಕಮಿಷನರ್ ಅವರ ನಡೆ ಮೆಚ್ಚುಗೆಗೆ ಪಾತ್ರವಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official