ಬೆಳ್ತಂಗಡಿ; ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ರವಿವಾರ ಭೇಟಿ ಮಾಡಿದರು.
ಆಸ್ಕರ್‌ಅವರ ಪತ್ನಿ ಬ್ಲೋಸಂ ಫರ್ನಾಂಡೀಸ್ ಹಾಗೂ ಕುಟುಂಬವರ್ಗದವರನ್ನು ಕಂಡು ಮಾತನಾಡಿದ ಬಿಷಪರು ಆಸ್ಕರ್ ಅವರಿಗೆ ಶೀಘ್ರ ಆರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥನೆ ನಡೆಸಿದರು. ಈಸಂದರ್ಭ ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಮುಖಂಡ ಎಂ.ಎ ಗಫೂರ್ ಇದ್ದರು. ಬಿಷಪರ ನಿಯೋಗದಲ್ಲಿ ಮಂಗಳೂರು ಸೈಂಟ್ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ಫಾ. ಮಾಣಿ, ಚಾನ್ಸ್‌ಲರ್ ಫಾ. ಲಾರೆನ್ಸ್ ಇವರು ಉಪಸ್ಥಿತರಿದ್ದರು.