Posts

ಎಸ್‌ಕೆಎಸ್ಎಸ್‌ಎಫ್ ವಿಖಾಯ ಬೆಳ್ತಂಗಡಿ ವಲಯ ಸದಸ್ಯರಿಂದ ಕುವೆಟ್ಟು ಸರಕಾರಿ ಶಾಲಾ ಆವರಣ ಸ್ವಚ್ಚತೆ

0 min read


ಬೆಳ್ತಂಗಡಿ; ಸ.ಉ.ಪ್ರಾಥಮಿಕ ಶಾಲೆ ಕುವೆಟ್ಟು ಇಲ್ಲಿನ ಆವರಣವನ್ನು ಎಸ್‌ಕೆಎಸ್ಎಸ್‌ಎಫ್ ವಿಖಾಯ ಬೆಳ್ತಂಗಡಿ ವಲಯ ಸದಸ್ಯರು ಶ್ರಮಾದಾನದ ಮೂಲಕ ಸ್ವಚ್ಚತೆಗೊಳಿಸಿ ಮಾದರಿಯಾದರು.

ಸ್ವಚ್ಚತಾ ಅಭಿಯಾನದ ಅಂಗವಾಗಿ ವಿಖಾಯ ಬೆಳ್ತಂಗಡಿ ವಲಯದ ಸದಸ್ಯರಿಂದ ಶಾಲಾ ಪರಿಸರದಲ್ಲಿ ಕಳೆ ತೆಗೆದು ತ್ಯಾಜ್ಯಗಳನ್ನು ಸಂಪೂರ್ಣ ಸ್ವಚ್ಚಗೊಳಿಸಲಾಯಿತು. 

ಶಾಲಾ ಎಸ್. ಡಿ.ಎಮ್ ಸಿ ಅಧ್ಯಕ್ಷ ಎಮ್.ಸಿರಾಜ್ ಚಿಲಿಂಬಿ ವಿಕಾಯದ ಈ ಸೇವಾ ಕಾರ್ಯವನ್ನು ಸ್ಲಾಘಿಸಿ ಅಭಿನಂದಿಸಿದರು.

ಎಸ್‌ಕೆಎಸ್‌ಎಸ್‌ಎಫ್ ಬೆಳ್ತಂಗಡಿ ಇದರ ಕೋಶಾಧಿಕಾರಿ ಹಕೀಂ ಬಂಗೇರ ಕಟ್ಟೆ, ವಿಖಾಯ ದ.ಕ ಜಿಲ್ಲೆ ಕೌನ್ಸಿಲರ್ ಖಾದರ್  ಬಂಗೇರಕಟ್ಟೆ,  ಬೆಳ್ತಂಗಡಿ ರಕ್ತದಾನಿ ಬಳಗ ಇದರ ಉಸ್ತುವಾರಿ ಅಬೂಬಕರ್ ಬಂಗೇರ ಕಟ್ಟೆ, ವಿಖಾಯ ಮಡಂತ್ಯಾರ್ ಕ್ಲಸ್ಟರ್ ಉಸ್ತುವಾರಿ ಬಶೀರ್ ಬಳ್ಳಮಂಜ,  ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಬೆಳ್ತಂಗಡಿ ಕ್ಲಸ್ಟರ್ ವಿಖಾಯ ಚೇರ್ಮೆನ್ ಉಸ್ಮಾನ್ ಸವಣಾಲು ಹಾಗೂ ಇತರ ವಿಖಾಯ ಕಾರ್ಯಕರ್ತರು ಈ ಶ್ರಮದಾನದಲ್ಲಿ ಪಾಲ್ಗೊಂಡರು. ಶಾಲಾ ಸಹಶಿಕ್ಷಕ ಸುರೇಶ್ ಶೆಟ್ಟಿ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment