Posts

ಎಸ್ಸೆಸ್ಸೆಪ್ ಇನ್ವಿಗೊರೇಟ್ ಕ್ಯಾಂಪಸ್ ಮೀಟ್ -2021

1 min read


ಎಸ್ಸೆಸ್ಸೆಪ್ ದ.ಕ ಜಿಲ್ಲಾ (ಈಸ್ಟ್ ) ವತಿಯಿಂದ ಡಿವಿಷನ್ ಹಾಗೂ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಹಾಗೂ ಕನ್ವೀನರ್ ಗಳ ಮೀಟ್ ಉಪ್ಪಿನಂಗಡಿ ಸುನ್ನಿ ಸೆಂಟರ್ ನಲ್ಲಿ ನಡೆಯಿತು. 

ಕ್ಯಾಂಪಸ್ ವಿಬಾಗದ ಪ್ರಸ್ತುತ ಸನ್ನಿವೇಶದ ಕುರಿತು, ಹಾಗೂ  ಮುಂದಿನ ದಿನಗಳಲ್ಲಿ ಕ್ಯಾಂಪಸ್ ಸಮಿತಿಯ ವಿವಿಧ ಕಾರ್ಯಾಚರಣೆ ಬಗ್ಗೆ ಚರ್ಚಿಸುವ ಮೂಲಕ ಅಭಿಪ್ರಾಯ ಸಂಗ್ರಹಿಸಿ, ಹಲವಾರು ಕಾರ್ಯಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಯಿತು.


ಎಸ್ಸೆಸ್ಸೆಪ್ ದ.ಕ (ಈಸ್ಟ್ ) ಜಿಲ್ಲಾ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ರವರ  ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, ಜಿಲ್ಲಾ ಸದಸ್ಯರೂ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷರಾದ ಎಫ್.ಎಚ್ ಮುಹಮ್ಮದ್ ಮಿಸ್ಬಾಹಿ ಮರ್ದಾಳ ಉದ್ಘಾಟಿಸಿದರು.

ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರೂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಮುಹಮ್ಮದ್ ಅಲಿ ತುರ್ಕಳಿಕೆ ಶುಭಹಾರೈಸಿ ಮಾತನಾಡಿ, ಕ್ಯಾಂಪಸ್ ನಲ್ಲಿ ಎಸ್ಸೆಸ್ಸೆಫ್ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು ಪ್ರಸ್ತಾವನೆಗೈದು. ಚರ್ಚೆಯ ನೇತೃತ್ವ ವಹಿಸಿದರು.

ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ವಿವಿಧ ಡಿವಿಷನ್ ಗಳ ಕ್ಯಾಂಪಸ್ ನಾಯಕರಾದ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ, ಫಯಾಝ್ ಗೇರುಕಟ್ಟೆ, ಇಬ್ರಾಹಿಂ ಕೋಡಪದವು, ಸ್ವಾಲಿಹ್ ಹನೀಫಿ ಜಾಲ್ಸೂರು, ಲುಕ್ಮಾನ್ ನೆಲ್ಯಾಡಿ  ಹಾಗೂ ಜಿಲ್ಲಾ ವ್ಯಾಪ್ತಿಯ ಸೆಕ್ಟರ್ ಗಳ ಕ್ಯಾಂಪಸ್ ಕಾರ್ಯದರ್ಶಿ, ಕನ್ವೀನರ್ ಗಳು ಉಪಸ್ಥಿತರಿದ್ದರು.

ಜಿಲ್ಲಾ ಕ್ಯಾಂಪಸ್ ಕನ್ವೀನರ್ ಅಶ್ಪಾಕ್ ಕೊಡುಂಗಾಯಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment