Posts

ಕೃಷಿ ಮಾರುಕಟ್ಟೆ ಶುಲ್ಕ ಹೆಚ್ಚಳ ವಿರೋಧಿಸಿ ತಾಲೂಕಿನ ಅಡಿಕೆ ವ್ಯವಹಾರ ವರ್ತಕರ ಏಕದಿನ ಮುಷ್ಕರ

0 min read


ಬೆಳ್ತಂಗಡಿ; ಕರ್ನಾಟಕ ಸರಕಾರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಶುಲ್ಕವನ್ನು 0.35% ಇದ್ದುದನ್ನು 1. % ಕ್ಕೆ ಏರಿಸಿರುವುದರಿಂದ ಕೃಷಿ ರಂಗಕ್ಕೆ ಆತಂಕವಿದೆ ಎಂದು ಸದ್ರಿ‌ ನೀತಿಯನ್ನು ವಿರೋಧಿಸಿ ತಾಲೂಕಿನ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರಸ್ತ ಸುಮಾರು 140 ರಷ್ಟು ಮಳಿಗೆದಾರರು ತಮ್ಮ ವ್ಯವಹಾರ ಡಿ.22 ರಂದು ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು.

ವರ್ತಕ ‌ಪ್ರಮುಖರಾದ ಉಮರ್‌ಕುಂಞಿ ನಾಡ್ಜೆ,  ಬಾಲಕೃಷ್ಣ ಶೆಟ್ಟಿ ಸವಣಾಲು, ಸತೀಶ್ ಶೆಟ್ಟಿ, ಪುಷ್ಪರಾಜ್ ಹೆಗ್ಡೆ ಮಡಂತ್ಯಾರು, ಇಸ್ಮಾಯಿಲ್ ಮಂಗಳೂರು ಸುಪಾರಿ, ವಿ.ಕೆ.ಫಾರೂಕ್, ಪ್ರಕಾಶ್ ಶೆಟ್ಟಿ, ಪದ್ಮರಾಜ್, ಪ್ರಶಾಂತ್ ಶೆಟ್ಟಿ,ಹೈದರ್ ಮಡಂತ್ಯಾರು, ಶಂಶುದ್ದೀನ್ ಜಾರಿಗೆಬೈಲು, ಸತ್ಯೇಂದ್ರ ಜೈನ್, ದರ್ಶನ್, ಸದಾನಂದ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಎಪಿಎಂಸಿ ಮತ್ತು ತಾಲೂಕು ಕಚೇರಿಯ ಎದುರು ಸಾಂಕೇತಿಕ ಪ್ರತಿಭಟನೆ ಕೈಗೊಂಡು ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment