ಬೆಳ್ತಂಗಡಿ; ಮನುಷ್ಯ ಸಾಮೂಹಿಕ ಜೀವಿ. ಪರಸ್ಪರ ಸಹಾಯವಿಲ್ಲದೆ ಬದುಕುವುದು ಕಷ್ಟ ಸಾಧ್ಯ. ಸಹಾಯ ಮಾಡಬೇಕಾದ ವ್ಯಕ್ತಿಗಳಿಗೆ ಸಹಾಯ ಮಾಡಬೇಕಾದ ರೀತಿಯಲ್ಲಿ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದರಲ್ಲಿ ಜಾತಿ ಧರ್ಮದ ಭೇದವಿರಬಾರದು ಎಂದು
ಎಸ್‌ವೈಎಸ್ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಅಶ್ರಫ್ ಸಖಾಫಿ ಮೂಡಡ್ಕ ಹೇಳಿದರು.
ಎಸ್‌ವೈಎಸ್ ಬೆಳ್ತಂಗಡಿ, ಮಡಂತ್ಯಾರು, ಉಜಿರೆ ಮತ್ತು ವೇಣೂರು ಸೆಂಟರ್ ಇವುಗಳ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಆ.26 ರಂದು ನಡೆದ ಸಾಂತ್ವನ ವಿಭಾಗದ ಇಸಾಬಾ ಕಾರ್ತಕರ್ತರ ಸಂಗಮ "ಸಿನೆರ್ಜೆಫಿ 22" ಅವರು ಉಪನ್ಯಾಸ ನೀಡುತ್ತಿದ್ದರು.
ಎಸ್‌ವೈಎಸ್ ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಹಾಫಿಲ್ ಹನೀಫ್ ಮಿಸ್ಬಾಹಿ ಉದ್ಘಾಟನೆ ನೆರೆವೇರಿಸಿದರು.
ಜಿಲ್ಲಾ ಕಾರ್ಯದರ್ಶಿ ಎಂಬಿಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು ಆರಂಭಿಕ ಮಾತುಗಳನ್ನಾಡಿ,
ಜಿಲ್ಲಾ ನಾಯಕರಾದ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್, ಸಯ್ಯಿದ್ ಶರಫುದ್ದೀನ್ ತಂಙಳ್ ವೇಣೂರು, ಉಸ್ಮಾನ್ ಬೇಂಗಿಲ ಉಪಸ್ಥಿತರಿದ್ದರು.
ಉಜಿರೆ ಸೆಂಟರ್ ರಶೀದ್ ಬಲಿಪಾಯ, ವೇಣೂರು ಸೆಂಟರ್ ಫಾರೂಕ್ ಸಖಾಫಿ, ಜಿಲ್ಲಾ ನಾಯಕರಾದ ಇಬ್ರಾಹಿಂ ಕಕ್ಕಿಂಜೆ, ಉಜಿರೆ ಸೆಂಟರ್ ಖಾಲಿದ್ ಮುಸ್ಲಿಯಾರ್ ಉಜಿರೆ, ಬೆಳ್ತಂಗಡಿ ಸೆಂಟರ್ ಹಾಜಿ ಹಸೈನಾರ್ ಶಾಫಿ, ನಝೀರ್ ಪೆರ್ದಾಡಿ, ಬಶೀರ್ ಅಹಮ್ಮದ್ ಗುರುವಾಯನಕೆರೆ, ಅಬ್ಬಾಸ್ ಗೋಳಿಯಂಗಡಿ ಮೊದಲಾದವರು ಭಾಗಿಯಾಗಿದ್ದರು.
ಇಸಾಬಾ ಕಾರ್ಯಕ್ರಮ ಸಂಯೋಜಕ ಎಂ.ಎ ಕಾಸಿಂ ಮುಸ್ಲಿಯಾರ್ ಸ್ವಾಗತಿಸಿದರು.
ನಾಲ್ಕು ಸೆಂಟರ್ ಗಳ ಇಸಾಬಾ ಕಾರ್ಯಾಚರಣೆಗೆ ಆರಿಸಲ್ಪಟ್ಟ 56 ಕಾರ್ಯಕರ್ತರು ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು.
"ಇಸಾಬಾ" ತಂಡ ನೆರೆ, ಮಳೆಹಾನಿ, ಇತರ ಅವಘಡದ ಸಂದರ್ಭಗಳಲ್ಲಿ ಸಮಾಜದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಸೇವೆಗೈಯ್ಯಲು ಸನ್ನದ್ದ ಸೇವೆಗೆ ಅಣಿಯಾಗಿರಲಿದ್ದಾರೆ.
ವರದಿ; ಅಚ್ಚು ಮುಂಡಾಜೆ