ಬೆಳ್ತಂಗಡಿ; ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳ ಸಭೆ ಎಸ್‌ಡಿಎಂ ಕಲಾಭವನ ಬೆಳ್ತಂಗಡಿಯಲ್ಲಿ ನಡೆದು ಬೇರೆ ಪಕ್ಷಗಳಿಂದ ಹಲವು ನಾಯಕರುಗಳು ಬಿಜೆಪಿ ಗೆ ಸೇರ್ಪಡೆ ಗೊಂಡರು.
ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡರಾಗಿದ್ದ ಚಂದನ್ ಪ್ರಸಾದ್ ಕಾಮತ್, ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಮುಂಡಾಜೆ ಗ್ರಾ.ಪಂ ಮಾಜಿ ಸದಸ್ಯೆ ಅಶ್ವಿನಿ ಹೆಬ್ಬಾರ್, ವೇಣೂರಿನ ಸತೀಶ್ ನಡಿವಾಳ, ಧರ್ಮಸ್ಥಳ ಗ್ರಾ.ಪಂ ಸದಸ್ಯೆ ಗಾಯತ್ರಿ, ಕುಕ್ಕಳದ ರಾಜೇಶ್ವರಿ, ಮಾಲಾಡಿ ಗ್ರಾ.ಪಂ ಸದಸ್ಯ ಪುನೀತ್ ಕುಮಾರ್, ಸಹಕಾರಿ ಧುರೀಣ ಪುಷ್ಪರಾಜ ಜೈನ್, ಕನ್ಯಾಡಿ ಎಸ್‌ಡಿಎಂಸಿ ಅಧ್ಯಕ್ಷ ನಂದ ಭಟ್, ಸತೀಶ್ ರಾವ್ ನಿಡ್ಲೆ, ಮಹೇಶ್ ಜೈನ್ ಧರ್ಮಸ್ಥಳ, ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಆಂಟೊನಿ ಕಲ್ಲೇರಿ, ಬಿಎಸ್‌ಎಫ್ ಮಾಜಿ ಯೋಧ ಸೆಬಾಸ್ಟಿಯನ್, ಆರಂಬೋಡಿ ಗ್ರಾ.ಪಂ ಮಾಜಿ ಸದಸ್ಯ ಆನಂದ ಶೆಟ್ಟಿ, ಕಾಶಿಬೆಟ್ಟು ಶನೈಶ್ಚರ ದೇವಸ್ಥಾನದ ಮೊಕ್ತೇಸರ ಜನಾರ್ದನ ಆಚಾರ್ಯ, ಕುಕ್ಕಳದ ವಿಠಲ, ಮೊಗ್ರು ಗ್ರಾಮದ ಕೇಶವ, ಕಲ್ಮಂಜ ಗುತ್ತು ಮನೆಯ ಸುಂದರಿ, ಮೊದಲಾದ ನಾಯಕರು, ಚಂದನ್ ಪ್ರಸಾದ್ ಕಾಮತ್ ಅವರ ಜೊತೆ ಹಲವಾರು ಮಂದಿ ಅಭಿಮಾನಿಗಳು ಬಿಜೆಪಿಗೆ ಸೇರ್ಪಡೆಗೊಂಡರು.
ಸಚಿವರಾದ ಸುನಿಲ್ ಕುಮಾರ್, ಶಾಸಕ ಹರೀಶ್ ಪೂಂಜ, ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೋಯೆಲ್ ಮೆಂಡೋನ್ಸಾ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ಚಾಳ್, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಜಿಲ್ಲಾ ಘಟಕದ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಮಂಡಲದ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ಮತ್ತು ಗಣೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.