ಬೆಳ್ತಂಗಡಿ; ತಾಲೂಕಿನ ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ನಿನ್ನೆಯಷ್ಟೇ ನೀರಿನ ಟ್ಯಾಕ್ಟರೊಂದು ಮಗುಚಿ ಬಿದ್ದು ಓರ್ವ ಮೃತಪಟ್ಟರು ಬೆನ್ನಿಗೇ ಇದೀಗ ಮಲವಂತಿಗೆ ಗ್ರಾಮದ ಬಂಗಾರಬಲಿಗೆ ಎಂಬಲ್ಲಿ ಇನ್ನೊಂದು ಟ್ಯಾಕ್ಟರ್ ದುರಂತ ನಡೆದಿದೆ.
ಈ ಅವಘಡದಿಂದ ಕಿಂಡಿ ಅಣೆಕಟ್ಟು ನಿರ್ಮಾಣದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ.ಮೃತ ಕಾರ್ಮಿಕ ಚಿಕ್ಕಮಗಳೂರು ಭಾಗದವರೆಂದು ಗೊತ್ತಾಗಿದೆ. ಕಿಂಡಿ ಅಣೆಕಟ್ಟು ಮತ್ತು ಸೇತುವೆ ಕಾಮಗಾರಿ ಅಲ್ಲದೆ ಅಲ್ಲಿಗೆ ಸಂದಿಸುವ ರಸ್ತೆಗೆ ಅಲ್ಲಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿ ವರ್ಷದಿಂದ ಪ್ರಗತಿಯಲ್ಲಿದೆ. ಹೀಗಿರುವಂತೆ ಇಂದು ಅಪರಾಹ್ನ ಈ ದುರ್ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು
ಹೆಚ್ಚಿನ ಮಾಹಿತಿ ಲಭಿಸಲಿದೆ.
-----
ವರದಿ; ಅಚ್ಚು ಮುಂಡಾಜೆ