Posts

ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಬದಿಯೇ ಅಪಾಯಕಾರಿ ಪೈಪ್‌ಲೈನ್ ಕಾಮಗಾರಿ; ಕ್ರಮಕ್ಕಾಗಿ ಡಿಸಿ ಗೆ ದೂರು

1 min read
ಬೆಳ್ತಂಗಡಿ: ಉಪ್ಪಿನಂಗಡಿ ಗುರುವಾಯನಕೆರೆ ಲೋಕೋಪಯೋಗಿ ರಸ್ತೆಯ ಪಕ್ಕದಲ್ಲಿ ಸಂಬಂಧಿತ ಸಕ್ಷಮದಿಂದ ಅನುಮತಿ ರಹಿತವಾಗಿ ಅಪಾಯಕಾರಿ ಹೊಂಡ ತೋಡಿ ದೊಡ್ಡ ಗಾತ್ರದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು ಇದರಿಂದ ಸಂಚಾರಕ್ಕೆ ಕಿರಿ ಕಿರಿ ಮತ್ತು ಅಪಘಾತವಾಗುವ ಭೀತಿ ಇದೆ. ಅಲ್ಲದೆ ಈ ಅಸಮರ್ಪಕ ಕಾಮಗಾರಿಯಿಂದ ಜನರ ತೆರಿಗೆ ಹಣ ದುರ್ವ್ಯಯವಾಗುತ್ತಿದೆ ಎಂದು ನಾಗರೀಕರ ಪರವಾಗಿ  ಸಾಮಾಜಿಕ ಕಾರ್ಯಕರ್ತ ಶೇಖರ್ ಲಾಯಿಲ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಲೋಕೋಪಯೋ ಇಲಾಖೆಗೆ ಸೇರಿದ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯ ತೀರಾ ಪಕ್ಕದಲ್ಲಿ ಬೆಳ್ತಂಗಡಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ದೊಡ್ಡ ಗಾತ್ರದ ಪೈಪ್‌ಗಳನ್ನು ತೀರ ಅಪಾಯಕಾರಿ ರೀತಿಯಲ್ಲಿ ಅಳವಡಿಸಲಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕರ್ನಾಟಕ ನೀರಾವರಿ  ನಿಗಮ ನಿಯಮಿತದ ಅಧಿಕಾರಿಗಳು ಯಾವುದೇ ಪಾರ್ವಾನುಮತಿ ಇಲ್ಲದೆ, ಸೂಕ್ತ ಸುರಕ್ಷಾ ಕ್ರಮಗಳನ್ನೂ ಅಳವಡಿಸದೇ ಕಾಮಗಾರಿ ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ. 

ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಿಂದ ಸುಮಾರು 7 ಮೀಟರ್ ಅಂತರ ಬಿಟ್ಟು ಕಾಮಗಾರಿ ನಡೆಸಬೇಕೆಂಬ ನಿಯಮವಿದ್ದರೂ ಅದನ್ನು ದಿಕ್ಕರಿಸಿ ಆಕ್ರಮವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದಾಗಿ ಮುಂದೆ ರಸ್ತೆ ಅಗಲೀಕರಣ ನಡೆಸುವ ಸಂದರ್ಭದಲ್ಲಿ ಈ ಪೈಪ್ ಲೈನ್ ಅನ್ನು ಅಗೆಯಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದಾಗಿ ಸಾರ್ವಜನಿಕರು ಕಟ್ಟಿದ ತೆರಿಗೆ ಹಣದ ಸಂಪೂರ್ಣ ದುರ್ಬಳಕೆಯಾದಂತಾಗುತ್ತದೆ. 

ಅಲ್ಲದೆ ರಸ್ತೆಯ ತೀರ ಹತ್ತಿರದಲ್ಲಿ ತೋಡಿರುವ ಈ ಹೊಂಡದಿಂದಾಗಿ ವಾಹನಗಳು ಹೊಂಡಕ್ಕೆ ಬಿಟ್ಟು ಅಪಘಾತಗಳಾಗುವ ಸಂಭವ ಕೂಡ ಇರುತ್ತದೆ. ಆದುದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರದೇಶಿಸಿ ಅನುಮತಿ ರಹಿತವಾಗಿ ನಡೆಸುತ್ತಿರುವ ಈ ಕಾಮಗಾರಿಯನ್ನು ತಡೆಹಿಡಿಯಬೇಕು. ಲೋಕೋಪಯೋಗಿ ಇಲಾಖಾ ನಿಯಮ ಅನುಸರಿಸಿ ಸುರಕ್ಷತೆ ಕಾಪಾಡಿಕೊಂಡು ಕಾಮಗಾರಿ ಮುಂದುವರಿಸುವಂತೆ  ನಿರ್ದೇಶಿಸಬೇಕು. ಇಲ್ಲದಿದ್ದಲ್ಲಿ ಮುಂದಕ್ಕೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಆ ವೇಳೆ ಈ ಲಿಖಿತ ದೂರನ್ನು  ಸಿವಿಲ್ ಪ್ರಕ್ರೀಯೆ ಸಂಹಿತೆಯ ಕಲಂ 80 ರ ಅಡಿಯಲ್ಲಿ ನೋಟೀಸೆಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ದೂರಿ‌ನ ಪ್ರತಿಯನ್ನು ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಕಚೇರಿ, ಮಂಗಳೂರು ವಿಭಾಗೀಯ ಕಚೇರಿ, ಕರ್ನಾಟಕ ನೀರಾವರಿ ನಿಗಮ ಉಡುಪಿ ಸಿದ್ದಾಪುರ ಕಚೇರಿ, ಸಹಾಯಕ ಆಯುಕ್ತರು (ಎ.ಸಿ) ಪುತ್ತೂರು  ಹಾಗೂ ತಹಶಿಲ್ದಾರರ ಅವಗಾಹನೆಗೂ ತರಲಾಗಿದೆ. ಒಟ್ಟಿನಲ್ಲಿ ಈ ಮನವಿಗೆ ಜಿಲ್ಲಾಧಿಕಾರಿಗಳು ಯಾವ ರೀತಿ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment