Posts

ದಾರಿಯಲ್ಲಿ ಗ್ರೇನೇಡ್ ಎಸೆದು ಮಾಜಿ ಸೈನಿಕನನ್ನು ಕೊಲೆಗೆ ಯತ್ನಿಸಿದರೇ? ಬೆಳ್ತಂಗಡಿ ತಾಲೂಕಿನ ಇಳಂತಿಲದಲ್ಲಿ ನಡೆದ ಘಟನೆ

1 min read


ಬೆಳ್ತಂಗಡಿ; ತಾಲೂಕಿನ ಇಳಂತಿಲ ಗ್ರಾಮದ ಮಾಜಿ ಯೋಧ ಜಯಕುಮಾರ್ ಪೂಜಾರಿ  ಎಂಬವರು ನಡೆದುಬರುವ ದಾರಿಯಲ್ಲಿ ಗ್ರೆನೇಡ್ ಸ್ಪೋಟಕ ಇರಿಸಿ‌ ಅವರನ್ನು ಕೊಲೆ ಮಾಡಲು ಯತ್ನಿಸಿದರೇ ಎಂಬ ಅನುಮಾನ ವ್ಯಕ್ತವಾಗಿದೆ.

 ಘಟನೆ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ಎಸ್.ಪಿ‌ ಅವರ ಹೇಳಿಕೆ ಪ್ರಕಾರ ಈ ಗ್ರೆನೇಡ್ ಗಳು ಹೆಚ್ಚೂ ಕಮ್ಮಿ 40 ವರ್ಷ ಹಳೆಯದು ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಪ್ರಕರಣದ ಸಾರಾಂಶ;

ದೂರುದಾರರಾದ ಜಯಕುಮಾರ್ ಪೂಜಾರಿ ಅವರು ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಒ ಆಗಿ ನಿವೃತ್ತಿ ಹೊಂದಿದವರಾಗಿದ್ದಾರೆ. ಅವರು ನವಂಬರ್ 6 ರಂದು ಸಂಜೆ ಸುಮಾರು 5.30 ಗಂಟೆಯಿಂದ 6.00 ಗಂಟೆಯ ವೇಳೆಗೆ ಉಪ್ಪಿನಂಗಡಿಯಿಂದ ಮನೆಯ ಕಡೆಗೆ ನಡೆದುಕೊಂಡು ಬರುವಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿತ್ತು.  ಅದರಲ್ಲಿ ಒಂದು ಗ್ರೈನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು ಉಳಿದ ನಾಲ್ಕು ಗ್ರೇನೇಡ್ ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿತ್ತು. ಜಯಕುಮಾರ್ ಅವರು ಸೈನ್ಯದಲ್ಲಿ ಕೆಲಸ ಮಾಡಿದವರಾದುದರಿಂದ  ಈ ವಸ್ತುಗಳು ಗ್ರೈನೇಡ್ ಎಂಬುದಾಗಿ ಅವರಿಗೆ ಸ್ಪಷ್ಟವಾಗಿ ತಿಳಿಯಿತು.  ಇವುಗಳನ್ನು ಯಾವುದಾದರೂ ಕಾಡು ಪ್ರಾಣಿಗಳು ಅಥವಾ ಇತರ ಸಾಕು ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತ ಅವರು ಅವುಗಳನ್ನು ಜಾಗರೂಕತೆಯಿಂದ ಸಂಗ್ರಹಿಸಿ ಮನೆಯ ಅಂಗಳದ ಮೂಲೆಯಲ್ಲಿಟ್ಟು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು  ಯಾರೋ ಅಪರಿಚಿತ ದುಷ್ಕರ್ಮಿಗಳು ಇವರು ಬರುವ ದಾರಿಯಲ್ಲಿ ಹಾಕಿದ್ದು, ಯಾಕಾಗಿ ಈ ಸಂಚು ರೂಪಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment