Posts

ಬೆಳ್ತಂಗಡಿ ಪೃಥ್ವಿ ಜ್ಯುವೆಲ್ಸ್ ನಲ್ಲಿ ದಸರಾ ದೀಪಾವಳಿ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

1 min read

ಬೆಳ್ತಂಗಡಿ; ನಾಲ್ಕು ದಶಕಗಳಿಂದ ಚಿನ್ನ, ವಜ್ರಾಭರಣ ಮತ್ತು ಬೆಳ್ಳಿ ಆಭರಣಗಳ ವ್ಯಾಪಾರದಲ್ಲಿ ಪ್ರಸಿದ್ಧಿ ಪಡೆದಿರುವ ಪೃಥ್ವಿ ಜ್ಯುವೆಲ್ಸ್ ಇದರ ಬೆಳ್ತಂಗಡಿ‌ ತಾಲೂಕಿನ ಮಳಿಗೆಯಲ್ಲಿ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಹಮ್ಮಿಕೊಂಡಿದ್ದ ಲಕ್ಕೀ ಕೂಪನ್ ಡ್ರಾ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಡಿ.5 ಮತ್ತು 6 ರಂದು ನಡೆಯಿತು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಲೈವ್ ಮೀಡಿಯಾ ನ್ಯೂಸ್ ಚಾನೆಲ್‌ನ ಚೇರ್ಮನ್ ಮತ್ತು ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ ಮುಂಡಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ‌ ಕುಡ್ವ ಭಾಗಿಯಾಗಿದ್ದರು.

ಗೂಡುದೀಪ ಸ್ಪರ್ಧೆಯ ವಿಜೇತರಾದ ಹರೀಶ್ ಕಡೆಶಿವಾಲಯ, ರಂಜಿತ್ ಗುರುವಾಯನಕೆರೆ ಬಹುಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು.

ದಸರಾ ಹಾಗೂ ದೀಪಾವಳಿ ಹಬ್ಬದ ಲಕ್ಕಿ ಡ್ರಾದಲ್ಲಿ ಪ್ರಥಮ ಬಹುಮಾನ ಟೆಲಿವಿಶನ್ ಅನ್ನು ಗ್ರೇಸಿ ಡಿ'ಸೋಜಾ ಕಲ್ಲಡ್ಕ, ದ್ವಿತೀಯ ಬಹುಮಾನ ರೆಫ್ರಿಜರೇಟರ್ ಅನ್ನು ಸುಮಂತ್ ನಾರಾವಿ, ತೃತೀಯ ಬಹುಮಾನ ವಾಷಿಂಗ್‌ ಮೆಷಿನ್ ಅನ್ನು ಆನಂದ ಗೌಡ ದಿಡುಪೆ ತಮ್ಮದಾಗಿಸಿಕೊಂಡರು.

ವಿಜೇತರಿಗೆ ರವಿವಾರ ಶೋರೂಂನಲ್ಲಿ‌ ಬಹುಮಾನ ವಿತರಣೆ ನಡೆಯಿತು. 

ಶಾಖಾ ವ್ಯವಸ್ಥಾಪಕ ಉಮಾನಾಥ್ ಪ್ರಭು, ಸಿಬ್ಬಂದಿಗಳಾದ ಹರಿಪ್ರಸಾದ್ ಪ್ರಭು, ಪ್ರಮೀಳಾ ಶೆಟ್ಟಿ, ದಿನೇಶ್ ಆಚಾರ್ಯ, ಗುರುಪ್ರಸಾದ್,ಸತೀಶ್, ರಕ್ಷಾ ಪ್ರಸಾದ್, ರೋನಾಲ್ಡ್ ಮೋನಿಸ್, ಜ್ಯೋತಿ, ಇವರು ಸಹಕರಿಸಿದರು. 

ಮಾರ್ಕೆಟಿಂಗ್ ಎಕ್ಸ್‌ಕ್ಯೂಟಿವ್ ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment