ಬೆಳ್ತಂಗಡಿ : ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್‌ನ 2020-21 ರ ಜಿಲ್ಲಾ ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲೊಂದಾದ “ಜನಪದ ವೈಭವ”ವನ್ನು ಫೆಬ್ರವರಿ 21 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ
ನಡೆಸಲು ತೀರ್ಮಾನಿಸಲಾಗಿದ್ದು , ವೈಯಕ್ತಿಕ ವಿಭಾಗದಲ್ಲಿ ನಡೆಯುವ ಸ್ಪರ್ಧೆಗಳಿಗೆ ಕಲಾಸಸಕ್ತರಿಗೆ ಪ್ರವೇಶ ಪಡೆಯಲು ಆಹ್ವಾನಿಸಲಾಗುತ್ತಿದೆ ಎಂದು ಲಯನ್ಸ್ ಜಿಲ್ಲಾ ಜಾನಪದ ವೈಭವ ಸ್ಪರ್ಧೆಯ ಜಿಲ್ಲಾ ಸಂಯೋಜಕ ಲ| ನಿತ್ಯಾನಂದ ನಾವರ ತಿಳಿಸಿದ್ದಾರೆ.
ಮಂಗಳವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಸ್ಪರ್ಧೆಯು ಹತ್ತು ವಿಭಾಗಳಲ್ಲಿ ಯಾವುದೇ ವಯೋಮಿತಿ ಇಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿ ನಡೆಯಲಿದೆ.
ಗೀಗೀ ಪದ, ಜನಪದ ಗೀತೆ, ತುಳು ಪಾಡ್ದನ,
ಆಟಿ ಕಳೆಂಜ, ಗುಮ್ಮಟೆ, ಕೊಂಬು ಊದುವಿಕೆ, ತಾಸೆ ಬಡಿಯುವಿಕೆ, ವಾದ್ಯ ನುಡಿಸುವಿಕೆ, ತೆಂಬರೆ ಬಡಿಯುವಿಕೆ,
ಪಿಲಿನಲಿಕೆ ಇವುಗಳು ವೈಯಕ್ತಿಕ ಸ್ಪರ್ಧೆಗಳಾಗಿದ್ದು, ಆಸಕ್ತರು ಜ. 31 ಆದಿತ್ಯವಾರದೊಳಗೆ ತಮ್ಮ
ಹೆಸರನ್ನು ಲ| ಕೆ. ಕೃಷ್ಣ ಆಚಾರ್ಯ ಉಜಿರೆ 9449079754, ಲ| ಧರಣೇಂದ್ರ ಕೆ. ಜೈನ್ ಗುರುವಾಯನಕೆರೆ 9448180439
ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ನೋಂದಾಯಿಸಿಕೊಳ್ಳಬಹುದು.
ಪರಿಕರಗಳನ್ನು ಸ್ಫರ್ಧಾಳುಗಳೇ
ತರಬೇಕು. ಕಾಲಾವಕಾಶ 3 ನಿಮಿಷ ಮಾತ್ರ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂಬುದಾಗಿ ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಹ ಸಂಯೋಜಕ ಲ| ವಸಂತ ಶೆಟ್ಟಿ, ಲ| ಧರಣೇಂದ್ರ ಕುಮಾರ್ ಜೈನ್ ಪೂರಕ ಮಾಹಿತಿ ನೀಡಿದರು. ಲ.ಧತ್ತಾತ್ರೇಯ ಗೊಲ್ಲ ಉಪಸ್ಥಿತರಿದ್ದರು.