Posts

ಅಪ್ರಾಪ್ತ ಬಾಲಕಿಯ ಅಪಹರಣ, ಅರೋಪಿಯ ಬಂಧನ

0 min read


ಬೆಳ್ತಂಗಡಿ: 9 ನೇ ತರಗತಿ ಓದುತ್ತಿದ್ದ 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಪ್ರಕರಣವೊಂದಕ್ಕೆ‌ ಸಂಬಂಧಿಸಿದಂತೆ ಆರೋಪಿ‌ಯನ್ನು ವೇಣೂರು‌ ಪೊಲೀಸರು ಬಂಧಿಸಿದ್ದಾರೆ. 

ಬಂಧಿತನನ್ನು ನಾಲ್ಕೂರು ಗ್ರಾಮದ ನಿವಾಸಿ ಪ್ರಶಾಂತ್(33ವ) ಎಂಬವನೆಂದು ಗುರುತಿಸಲಾಗಿದೆ. ಬಾಲಕಿ ಮನೆಯರು ನೀಡಿದ ದೂರಿನ‌ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ವೇಣೂರು ಠಾಣೆಯಲ್ಲಿ ಕೋಕ್ಸೋ ಪ್ರಕರಣ ದಾಖಲಾಗಿದೆ.

ಘಟನೆ ನಡೆದ‌ಬಗ್ಗೆ ಬಾಲಕಿ ಮನೆಯಬರು ಜೂ.  28 ರಂದು ದೂರದ ಸಂಬಂಧಿಯಾದ ಆರೋಪಿಯನ್ನು ಹೆಸರಿಸಿ ದೂರು‌ನೀಡಿದ್ದರು.

 ಅಪ್ರಾಪ್ತ ಯುವತಿಯ ಪರಿಚಯ ಮಾಡಿಸಿಕೊ‌ಡ ಪ್ರಶಾಂತ್ ಆಕೆ ಸಂಬಂಧಿ ಮನೆಗೆ ಹೋಗುತ್ತಿದ್ದಾಗ ಅಪಹರಿಸಿದ್ದಾನೆ ಎಂದು ದೂರು ದಾಖಲಾಗಿತ್ತು. ಬಳಿಕ ನಡೆದ ತನಿಖೆಯ ವೇಳೆ ಆರೋಪಿಯನ್ನು ಮತ್ತು ಬಾಲಕಿಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ.

ಇದೊಂದು ಲೈಂಗಿಕ ಹಲ್ಲೆ ಪ್ರಕರಣವಾಗಿದ್ದು, ಜೊತೆಗೆ ಬಾಲಕಿಯನ್ನು ಅಪಹರಿಸಿರುವ ಬಗ್ಗೆಯೂ ಕೇಸು‌ದಾಖಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment