Posts

ಬೆಸ್ಟ್ ಫೌಂಡೇಶನ್ ಬ್ರಹ್ಮಶ್ರೀ ಟ್ರಸ್ಟ್, ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಿಯೋನ್ ಆಶ್ರಮಕ್ಕೆ ಬಟ್ಟೆ ಹಸ್ತಾಂತರ

0 min read


ಬೆಳ್ತಂಗಡಿ; ಬೆಸ್ಟ್ ಫೌಂಡೇಶನ್ (ರಿ), ಬ್ರಹ್ಮಶ್ರೀ ಎಜುಕೇಶನ್ ಮತ್ತು ಸೋಷಿಯಲ್ ಟ್ರಸ್ಟ್ ಹಾಗೂ ಯುವ ಕಾಂಗ್ರೆಸ್ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು  ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ ಸಿಯೋನ್ ಆಶ್ರಮಕ್ಕೆ ಭೇಟಿ ಬಟ್ಟೆಗಳನ್ನು ಕೊಡುಗೆಯಾಗಿ  ನೀಡಲಾಯಿತು.


ಹೈಕೋರ್ಟ್ ವಕೀಲರು ಹಾಗೂ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ‌‌ ಅವರ ನೇತೃತ್ವದಲ್ಲಿ ತೆರಳಿದ‌ ನಿಯೋಗದಿಂದ, 

ಇತ್ತೀಚೆಗೆ ಕೋವಿಡ್ 19 ಸೋಂಕಿನ ಹೊಡೆತಕ್ಕೆ ಸಿಲುಕಿ ನಲುಗಿದ ಆಶ್ರಮದ ಸ್ಥಿತಿಗತಿಗಳ ವಿವರ ಪಡೆದು ಸಾಂತ್ವನ ಹೇಳಿತು.

ಈ‌ಸಂದಿಗ್ಧ ಸಂದರ್ಭದಲ್ಲಿ ದೃತಿಗೆಡದೆ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ ಆಶ್ರಮದ ಟ್ರಸ್ಟ್‌ ಅನ್ನು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಬೆಳ್ತಂಗಡಿ ನಗರ ಅಧ್ಯಕ್ಷ ಅನಿಲ್ ಪೈ,ಯುವ ಇಂಟೆಕ್ ನಗರ ಅಧ್ಯಕ್ಷ ನವೀನ್ ಗೌಡ, ಬೆಳ್ತಂಗಡಿ ಸೇವಾದಳ ಸಾಮಾಜಿಕ ಜಾಲತಾಣದ ಗಣೇಶ್ ಕಣಿಯೂರು, ಅಜಯ್ ಮಟ್ಲಾ , ಪ್ರಜ್ವಲ್ ಜೈನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment