Posts

ದ.ಕ ಜಿಲ್ಲೆಯಲ್ಲಿ ನಾಳೆಯಿಂದ ಸಂಜೆ 5 ಗಂಟೆವೆರೆಗೆ ಓಪನ್! ಉಸ್ತುವಾರಿ ಸಚಿವರಿಂದ ಸುಳಿವು

0 min read

ಬೆಳ್ತಂಗಡಿ: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೊಳಗೆ ಸರಕಾರದಿಂದ ಹೊಸ ಅನ್ಲಾಕ್‌ ನೀತಿ‌ಬರುವ ಸಾಧ್ಯತೆ ಇದ್ದು ಸಂಜೆ 5 ಗಂಟೆಯವರೆಗೂ ಅಂಗಡಿ ಮುಂಗಟ್ಟು ತೆರೆಯಲು‌ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳಿವು ನೀಡಿದ್ದಾರೆ.

ಕೊಕ್ಕಡದಲ್ಲಿ‌ ಲೈವ್ ಮೀಡಿಯಾ ಜೊತೆ ಮಾತನಾಡಿದ‌ ಸಚಿವರು ಹೀಗೊಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ  ಸಿ.ಎಂ ಜೊತೆ ಮಾತನಾಡಲಾಗಿದೆ. ಸರಕಾರದ ಕಾರ್ಯದರ್ಶಿಗಳು  ಅಂತಿಮ ನಿರ್ಧಾರ ಕೈಗೊಳ್ಳಲಿದ್ದು ಲಿಖಿತ ಆದೇಶವಾಗಿ ಗುರುವಾರ ಸಂಜೆಯೊಳಗೆ ಹೊಸ ನೀತಿ ಬರುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment