ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಅತ್ಯಾಚಾರ ಮಾಡಿ , ಗರ್ಭಿಣಿಯಾದ ನಂತರ ಮೋಸ ಮಾಡಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ.
ಆರೋಪಿ ಲಾಯಿಲ ಗ್ರಾಮದ ಕಿರಣ್ ಎಂಬವನನ್ನು ಪೊಲೀಸರು ಬಂಧಿಸಿರುತ್ತಾರೆ.ಆರೋಪಿ ಕಿರಣ್ ಎಂಬಾತ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು ,ಬಳಿಕ ತುಂಬಾ ಸಲುಗೆಯಿಂದಿದ್ದು, ಹುಡುಗಿಯ ಮನೆಗೆ ಹೋಗಿ ಬರುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದನು.
ಆರೋಪಿಯು ಸಂತ್ರಸ್ತೆಯ ಮನೆಗೆ ಹೋಗಿ , ಮಾತನಾಡುತ್ತಾ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು, ಸಂತ್ರಸ್ತೆ ಆಕ್ಷೇಪಿಸಿದರೂ ಕೇಳದೇ ನಾನು ನಿನ್ನನ್ನು ಮದುವೆಯಾಗುವ ಹುಡುಗ ಎಂದು ನಂಬಿಸಿ ಬಲತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿ ಏಳುವರೆ ತಿಂಗಳ ಗರ್ಭವತಿಯಾಗಲು ಕಾರಣನಾಗಿರುತ್ತಾನೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ