Posts

ಶಿಶಿಲ‌ ನದಿಯಲ್ಲಿ‌‌ ಸ್ನಾನಕ್ಕೆ ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

0 min read


ಬೆಳ್ತಂಗಡಿ: ತಾಲೂಕು ಶಿಶಿಲ ಗ್ರಾಮದ ಮುರತಗುಂಡಿ ಎಂಬಲ್ಲಿರುವ ಸೇತುವೆ ಬಳಿ ನದಿನೀರಿನಲ್ಲಿ ಸ್ನಾನ ಮಾಡಲೆಂದು ಹೋದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಡಿ.31 ರಂದು ನಡೆದಿದೆ.

ಶಿಶಿಲ ಗ್ರಾಮದ ಕಾರೆಗುಡ್ಡೆ ನಿವಾಸಿ ಸುರೇಶ ಕೆ. (32 ವ.) ‌ಎಂಬವರೇ ಮೃತಪಟ್ಟವರು.

ಅವರುಗು ರುವಾರ ಸಂಜೆ  4.30 ರ ಸುಮಾರಿಗೆ  ಶಿಶಿಲ ಸೇತುವೆ ಎಂಬಲ್ಲಿಗೆ  ಸ್ನಾನ ಮಾಡಲೆಂದು ಹೋಗಿದ್ದವರು ತಡರಾತ್ರಿಯಾದರೂ ವಾಪಾಸ್ ಬಾರದೇ ಇದ್ದುದ್ದರಿಂದ ಹುಡುಕಾಡಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೂರ್ಚೆ ರೋಗ ಕೂಡ ಇದ್ದ ಅವರು, ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ಇದೆ. ಈ ಕುರಿತು ‌ಧರ್ಮಸ್ಥಳ   ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment