Posts

ವಿದ್ಯುತ್ ಅವಘಡಕ್ಕೆ ತೆಕ್ಕಾರಿನ ಸರಳಿಕಟ್ಟೆಯಲ್ಲಿ ರಾಷ್ಟ್ರಪಕ್ಷಿ ನವಿಲು ಬಲಿ

0 min read

ಬೆಳ್ತಂಗಡಿ; ರಾಷ್ಟ್ರಪಕ್ಷಿ ನವಿಲೊಂದು ತೆಕ್ಕಾರು ಗ್ರಾಮದ ಸರಳಿಕಟ್ಟೆ ಎಂಬಲ್ಲಿ ವಿದ್ಯುತ್ ಅವಘಡಕ್ಕೆ ತುತ್ತಾಗಿ ರವಿವಾರ ಸಂಜೆ ಸಾವನ್ನಪ್ಪಿದೆ.

ಸಂಜೆ 6.45 ರ ವೇಳೆಗೆ ಘಟನೆ ನಡೆದಿದ್ದು ವಿವರ ಅರಿತ ತೆಕ್ಕಾರು ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಅವರು ಧಾವಿಸಿ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ.

ಸ್ಥಳದಲ್ಲಿ‌ ಐವತ್ತಕ್ಕೂ ಅಧಿಕ‌ ಮಂದಿ ಜಮಾಯಿಸಿದ್ದು, ಸ್ಥಳಕ್ಕೆ ಉಪ್ಪಿನಂಗಡಿ ಠಾಣೆಯ ಪೊಲೀಸ್ ಅಬ್ದುಲ್ ಸಲೀಂ, ಪಂಚಾಯತ್ ಸಿಬ್ಬಂದಿ ಖಲಂದರ್‌ ಶಾಫಿ ಹಾಗೂ ಇತರರು ಆಗಮಿಸಿದ್ದಾರೆ.‌

ಪಶು ವೈದ್ಯಾಧಿಕಾರಿ ಆಗಮಿಸಿದ‌ ಬಳಿಕ ನವಿಲಿನ‌ ಮೃತದೇಹದ ಮರಣೋತ್ತರ ಪರೀಕ್ಷೆ‌ ಪಕ್ರಿಯೆ ನಡೆಸಿ ಇಲಾಖೆ ನಿಯಮದಂತೆ ಅಂತ್ಯಸಂಸ್ಕಾರ ನಡೆಯಲಿದೆ.

ತೆಕ್ಕಾರು ಪರಿಸರದಲ್ಲಿ ನವಿಲುಗಳ‌ ಹಿಂಡೇ ಕಾಣಸಿಗುತ್ತಿದ್ದು ಗದ್ದೆ ಮತ್ತು ಕೃಷಿಗೆ ನಷ್ಟ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment