Posts

ಉಜಿರೆ ಮಗು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾದ 26 ಮಂದಿ ಪೊಲೀಸರಿಗೆ ನಗದು ಬಹುಮಾನ ಸಹಿತ ಪ್ರಶಂಸನಾ ಪತ್ರ

1 min read


ಬೆಳ್ತಂಗಡಿ; ಉಜಿರೆಯ ಉದ್ಯಮಿ, ಬಿಜೋಯ್ ಎ.ಜೆ ಅವರ ಪುತ್ರ ಅನುಭವ್ ಅವರ ಅಪಹರಣ ಪ್ರಕರಣವನ್ನು 36 ಗಂಟೆಯೊಳಗೆ ಭೇದಿಸಿ, ಬಾಲಕನನ್ನು ಸುರಕ್ಷಿತವಾಗಿ ವಾಪಾಸು ಕರೆತರುವ ಮಹತ್ವದ ಕಾರ್ಯಾಚರಣೆಯಲ್ಲಿ ಭಾಗಿಯಾದ ಒಟ್ಟು 26 ಮಂದಿ ಪೊಲೀಸರಿಗೆ ಪಶ್ಚಿಮ‌ ವಲಯ‌ ಪೊಲೀಸ್ ಮಹಾ ನಿರ್ದೇಶಕ ದೇವಜ್ಯೋತಿ ರೇ.‌ಐಪಿಎಸ್ ಅವರು ನಗದು ಬಹುಮಾನ ಸಹಿತ ಪ್ರಶಂಸನಾ ಪತ್ರ ಪ್ರಕಟಿಸಿದ್ದಾರೆ.


ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಡಿಎಸ್‌ಬಿ ಇನ್ಸ್‌ಪೆಕ್ಟರ್‌ಗಳಾದ ರವಿ ಮತ್ತು ಚೆಲುವರಾಜು ಬಿ, ಸಬ್ ಇನ್ಸ್‌ಪೆಕ್ಟರ್ ಗಳಾದ ನಂದ ಕುಮಾರ್ ಬೆಳ್ತಂಗಡಿ ಠಾಣೆ, ಪವನ್ ನಾಯ್ಕ್ ಧರ್ಮಸ್ಥಳ ಠಾಣೆ, ಕುಮಾರ್ ಕಾಂಬ್ಲೆ ಬೆಳ್ತಂಗಡಿ ಟ್ರಾಫಿಕ್ ಠಾಣೆ, ಈರಯ್ಯ ಡಿ‌ಎನ್ ಉಪ್ಪಿನಂಗಡಿ ಠಾಣೆ, ಹೆಡ್ ಕಾನ್ಸ್‌ಟೇಬಲ್ ಗಳಾದ ವೆಂಕಟೇಶ್ ನಾಯ್ಕ್ ಬೆಳ್ತಂಗಡಿ ಸರ್ಕಲ್, ಇಬ್ರಾಹಿ ಬೆಳ್ತಂಗಡಿ ಠಾಣೆ, ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಳಾದ ಪ್ರಮೋದ್ ಮತ್ತು ಲತೀಫ್, ಉಪ್ಪಿನಂಗಡಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಳಾದ  ಉದಯ ರೈ , ಪ್ರಶಾಂತ್ ಮತ್ತು ಸುರೇಶ್ , ಧರ್ಮಸ್ಥಳ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಳಾದ ಬೆನ್ನಿ ಮತ್ತು ರಾಹುಲ್ ರಾವ್,  ಡಿಸಿಐಬಿ ಹೆಡ್ ಕಾನ್ಸ್‌ಟೇಬಲ್ ಗಳಾದ ತಾರನಾಥ ಎಸ್, ಲಕ್ಷ್ಮಣ‌ ಕೆ‌ ಮತ್ತು ಕುಮಾರ್ ಹೆಚ್, ಉಪ್ಪಿನಂಗಡಿ ಠಾಣೆಯ ಕಾನ್ಸ್‌ಟೇಬಲ್ ಪ್ರವೀಣ್, ಎಸ್.ಪಿ‌ ಕಚೇರಿಯ ಗಣಕಯಂತ್ರ ವಿಭಾಗದ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಮತ್ತು  ಸಿಬ್ಬಂದಿ ಸಂಪತ್, ಡಿಸಿಐಬಿ ವಾಹನ ಚಾಲಕ ಸೋನ್ಸ್ ಇವರೇ ಇದೀಗ ಉನ್ನತ ಅಧಿಕಾರಿಗಳಿಂದ ವಿಶೇಷ ಮನ್ನಣೆಗೆ ಪಾತ್ರರಾಗಿರುವವರು.

ಅತ್ಯುತ್ತಮ ಬೀಟ್ ಕರ್ತವ್ಯಕ್ಕೆ ಐವರು ಪೊಲೀಸರಿಗೆ ಮನ್ನಣೆ;

ಇದರ ಜೊತೆಗೆ ಅತ್ಯುತ್ತಮ ರೀತಿಯಲ್ಲಿ‌ ಬೀಟ್ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಜಿಲ್ಲೆಯ ಐವರು ಪೊಲೀಸರಿಗೆ ಐಜಿಪಿ ಅವರು ವಿಶೇಷ ಮನ್ನಣೆ ಪ್ರಕಟಿಸಿದ್ದಾರೆ.

ವಿಟ್ಲ ಠಾಣೆಯ ಹೆಡ್ ಕಾನ್ಸ್‌ಟೇಬಲ್ ದಿನೇಶ್ ಕುಮಾರ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಪುನೀತ್ ಎನ್.ಸಿ, ವೇಣೂರು ಠಾಣೆಯ ಕಾನ್ಸ್‌ಟೇಬಲ್ ವಿಜಯ ಕುಮಾರ್ ರೈ, ಪುತ್ತೂನಗರ ಠಾಣೆ ಕಾನ್ಸ್‌ಟೇಬಲ್ ಶರೀಫ್ ಸಾಬ್ ನದಾಫ್ ಮತ್ತು ಸುಬ್ರಹ್ಮಣ್ಯ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ಮೇಘಾ ಕೆ.ಡಿ ಅವರಿಗೆ ನಗದು ಬಹುಮಾನ ಪ್ರಕಟಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment