ಬೆಳ್ತಂಗಡಿ; ಶಿರ್ಲಾಲು ಗ್ರಾ.ಪಂ ವ್ಯಾಪ್ತಿಯ ಕರಂಬಾರು ಕ್ವಾಟ್ರಸ್ ಬಳಿ ರಾಮ್ ಕುಮಾರ್ ಅವರ ಜಾಗದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿದ ಘಟನೆ ರವಿವಾರ ನಡೆಯಿತು.
ಜನತೆಯ ಕರೆಗೆ ಸ್ಪಂದಿಸಿದ ಉಜಿರೆಯ ಉರಗ ಪ್ರೇಮಿ ಜೋಯ್ ಮಸ್ಕರೇನ್ಹಸ್(ಸ್ನೇಕ್ ಜೋಯ್) ಅವರು ಧಾವಿಸಿ ಹಾವನ್ನು ತನ್ನ ಕೌಶಲ್ಯದಿಂದ ಹಿಡಿದು ಸುರಕ್ಷಿತವಾಗಿ ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಿ ಜನರ ಭಯ ದೂರವಾಗಿಸಿದರು.