Posts

ಲಾಡಿ 'ಮಜ್‌ಮುಸ್ಸ‌ಅದ' ಸಂಸ್ಥೆಯಲ್ಲಿ ಫೆ.1 ರಂದು ಬೃಹತ್ ಅಜ್ಮೀರ್ ಮೌಲಿದ್‌ ಹಾಗೂ ಆಧ್ಯಾತ್ಮಿಕ ಸಂಗಮ

1 min read




ಬೆಳ್ತಂಗಡಿ; ತಾಲೂಕಿನ ಪಡಂಗಡಿ ಗ್ರಾಮದ ಲಾಡಿ ಎಂಬಲ್ಲಿ ಒಂದು ವರ್ಷದಿಂದ ಜ್ಞಾನ, ಆದ್ಯಾತ್ಮಿಕ ಹಾಗೂ ನೈತಿಕ ಜೀವನ ಪಾಠಗಳೊಂದಿಗೆ ಅನಾಥ - ಬಡ ಮಕ್ಕಳನ್ನು ಪೋಷಿಸಿ , ಬಡ ನಿರ್ಗತಿಕ ವಿಧ್ಯಾರ್ಥಿಗಳಿಗೆ ಧಾರ್ಮಿಕ , ಲೌಕಿಕ ಶಿಕ್ಷಣವನ್ನು ಒಂದೇ ಸೂರಿನಡಿ ನೀಡಿ ಅವರನ್ನು ವಿದ್ಯಾಸಂಪನ್ನರನ್ನಾಗಿಸಿ , ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಗುರುತಿಸುವಂತೆ ಮಾಡುವ ಗುರಿಯೊಂದಿಗೆ ಕಳೆದ ವರ್ಷ ಆ.10 ರಂದು ಸ್ಥಾಪಿತಗೊಂಡ ಸಂಸ್ಥೆಯಾಗಿದೆ 'ಮಜ್‌ಮ‌ಉಸ್ಸ‌ಅದ' 

ಈ ಸಂಸ್ಥೆಯ ವತಿಯಿಂದ ದಿನಾಂಕ ಫೆ.1 ರಂದು ಸಂಜೆ 4 ಗಂಟೆಗೆ ಬೃಹತ್ ಅಜ್ಮೀರ್ ಮೌಲಿದ್‌ ಹಾಗೂ ಆಧ್ಯಾತ್ಮಿಕ ಸಂಗಮ  ಮಜ್‌ಮಉಸ್ಸ‌ಅದ ಕ್ಯಾಂಪಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಚೇರ್ಮೆನ್ ಕೆ.ಎಚ್. ಸಿರಾಜುದ್ದೀನ್ ಝಹ್‌ರಿ ಅಲ್-ಪುರ್ಖಾನಿ ಹೇಳಿದರು.

ಬೆಳ್ತಂಗಡಿ ಪ್ರೆಸ್‌ಕ್ಲಬ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.


ಕಾರ್ಯಕ್ರಮದ ದುಆ ಹಾಗೂ ನೇತೃತ್ವವನ್ನು ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಕೂರತ್ ತಂಙಳ್ ವಹಿಸಲಿದ್ದಾರೆ.

ಎ.ಕೆ.ಅಬ್ದುಲ್ ಹಕೀಂ ಮದನಿ ಮುದರ್ರಿಸ್ ಕರೋಪಾಡಿ ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಉಪ ಖಾಝಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ತಂಙಳ್ ಗುರುವಾಯನಕೆರೆ ನೆರವೇರಿಸಲಿದ್ದಾರೆ.


ಅಸ್ಸಯ್ಯಿದ್ ಕಾಜೂರು ತಂಙಳ್ ಕಾರ್ಯಕ್ರಮದಲ್ಲಿ ಅಶಂಸ ಭಾಷಣ ಮಾಡಲಿದ್ದಾರೆ.


ಟಿ.ಎಂ. ಮುಹ್‌ಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ಹಾಗೂ ಮಜ್‌ಮಉಸ್ಸ‌ಅದ ಸಂಸ್ಥೆಯ ಚೇರ್ಮನ್ ಕೆ.ಎಚ್. ಸಿರಾಜುದ್ದೀನ್ ಝಹ್‌ರಿ ಅಲ್-ಪುರ್ಖಾನಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣವನ್ನು ನಡೆಸಲಿದ್ದು, ಮುಖ್ಯ ಪ್ರಭಾಷಣವನ್ನು‌ ನೌಫಲ್ ಸಖಾಫಿ ಕಳಸ ನಡೆಸಿಕೊಡಲಿದ್ದಾರೆ.


ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಏರ್ಪಡಿಸಿರುವ‌ ಕಾರ್ಯಕ್ರಮದಲ್ಲಿ ಸಯ್ಯಿದ್, ಉಲಮಾ-ಉಮರಾ‌ ನಾಯಕರು, ಸಾಮಾಜಿಕ ಮುಂದಾಳುಗಳು, ಇನ್ನಿತರ ಗಣ್ಯಾತೀತ ಅಥಿತಿಗಳು ಭಾಗವಹಿಸಲಿದ್ದಾರೆ ಎಂದರು. 

ಈಗಾಗಲೇ ಸಂಸ್ಥೆಯಲ್ಲಿ 18 ವಿದ್ಯಾರ್ಥಿಗಳು ಸನಿವಾಸ ಶೈಲಿಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದು, ಮುಂದಿನ ರಂಝಾನ್ ನಂತರ 50 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದ್ದೇವೆ. ಹಿಫ್ಲುಲ್ ಖುರ್‌ಆನ್ ಸಂಸ್ಥೆ ಆರಂಭಿಸಲಿದ್ದೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ

ಅಬ್ದುಲ್ ಅಝೀಝ್ ಹಾಜಿ ಎಡ್ತೂರುಪದವು, ಅಬ್ಬಾಸ್ ಹಾಜಿ ಕತಾರ್, ಬಶೀರ್ ಗೋಳಿಯಂಗಡಿ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment