Posts

ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಘಟಕ ಉದ್ಘಾಟನೆ || ಡಾ.‌ವೀರೇಂದ್ರ ಹೆಗ್ಗಡೆಯವರು, ಸಚಿವ ಸುನಿಲ್ ಕುಮಾರ್, ಸಚಿವ ಅಂಗಾರ ಸಹಿತ ಗಣ್ಯರು ಭಾಗಿ

1 min read


ಬೆಳ್ತಂಗಡಿ; ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ಡಯಾಲಿಸಿಸ್ ಘಟಕ ರವಿವಾರ ದಂದು ಉದ್ಘಾಟನೆಗೊಂಡಿತು.


ಶ್ರೀ ಕ್ಷೇತ್ರ ಧರ್ಮಸ್ಥಳದ  ಧರ್ಮಾಧಿಕಾರಿಯೂ, ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಡಾ.‌ಡಿ ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.



ರಾಜ್ಯದ ಕನ್ನಡ ಮತ್ತು ಸಂಸೃತಿ ಇಲಾಖೆ ಹಾಗೂ ಇಂಧನ ಖಾತೆ ಸಚಿವ‌ ಸುನಿಲ್ ಕುಮಾರ್,

ಬಂದರು ಮೀನುಗಾರಿಕೆ ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್ ಹಾಗೂ ಇತರ ಗಣ್ಯರು ಜೊತೆಯಾಗಿ ನೂತನ ಘಟಕವನ್ನು ಲೋಕಾರ್ಪಣೆಗೊಳಿಸಿದರು.


ಸಮಾರಂಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ, ಉಜಿರೆ ಶ್ರೀ‌ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್,ತಾ.‌ಆರೋಗ್ಯಾಧಿಕಾರಿ ಡಾ.‌ಕಲಾಮಧು ಶೆಟ್ಟಿ, ಮಂಗಳೂರಿನ‌ ಮೂತ್ರಪಿಂಡ ತಜ್ಞ ಡಾ.‌ಸಂತೋಷ್ ಪೈ. ಎಸ್‌ಡಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಂಜನ್ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್, ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ದನ್, ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್ ಹೆಚ್ ಮಂಜುನಾಥ್, ಉದ್ಯಮಿ ಮೋಹನ್ ಕುಮಾರ್, ಪಿಡಿಒ‌ ಪ್ರಕಾಶ ಶೆಟ್ಟಿ ನೊಚ್ಚ, ಶಶಿಧರ ಶೆಟ್ಟಿ ಬರೋಡಾ, ಯೋಗೀಶ್ ನಡಕರ, ಕೇಶವ ಭಟ್ ಅತ್ತಾಜೆ, ಡಾ. ಮೋಹನ್‌ದಾಸ್ ಕೊಕ್ಕಡ, ಪಾಂಡುರಂಗ ಭಂಡಾರ್ಕರ್, ಭಾಸ್ಕರ ಧರ್ಮಸ್ಥಳ, ಗ್ರಾ.ಯೋ.‌ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.




ಕುಮಾರಿ ಸಿಂಧೂರಾ ಪ್ರಾರ್ಥನೆ ಹಾಡಿದರು. ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ನ‌ ಟ್ರಸ್ಟಿ ಡಿ‌ ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಹೇಮಾ ವಚ್ಚ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಗೀತಾ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment