Posts

ಉಕ್ರೇನ್‌ನಿಂದ ಸುರಕ್ಷಿತವಾಗಿ ದೆಹಲಿ ತಲುಪಿದ ಉಜಿರೆಯ ಹೀನಾ ಫಾತಿಮಾ

1 min read

ಬೆಳ್ತಂಗಡಿ; ಯುದ್ಧಗ್ರಸ್ತ ನಾಡು ಉಕ್ರೇನ್ ನಿಂದ ಸ್ವಯಂ ರಕ್ಷಿಸಿಕೊಂಡ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಸುರಕ್ಷಿತವಾಗಿ ಶನಿವಾರ(ಇಂದು) ಬೆಳಿಗ್ಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.

ಹೀನಾ ಫಾತಿಮಾ ಅವರನ್ನೊಳಗೊಂಡ 7 ಮಂದಿಯ ತಂಡ ಪೋಲೆಂಡ್ ನಿಂದ ಶುಕ್ರವಾರ 

ಪ್ರಯಾಣಿಸಿದ್ದು ದೆಹಲಿ ತಲುಪಿದರು.ತನ್ನ ನೆಲೆಯ ಬಳಿಯೇ ರಷ್ಯಾ ಸೈನ್ಯ ನಡೆಸಿದ ಸ್ಪೋಟ, ರೈಲು ಮಾರ್ಗದ ಮೂಲಕ ಬರುವ ವೇಳೆ ನಡೆದ ರೈಲು ನಿಲ್ದಾಣ ದಾಳಿ ಇದೆಲ್ಲದರಿಂದ ಅಣತಿ ದೂರದಿಂದಲೇ ಪಾರಾಗಿ ಪ್ರಾಣ ರಕ್ಷಿಸಿಕೊಂಡ ಹೀನಾ ಫಾತಿಮಾ ಅವರು ಪೋಲೆಂಡ್ ತಲುಪುತ್ತಿದ್ದಂತೇ ಅಲ್ಲಿ ಭಾರತೀಯ ವಿದೇಶಾಂಕ ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು.

22 ಗಂಟೆಗಳ ಕಾಲ ಹೊಟ್ಟೆಗೆ ಹಿಟ್ಟು ಮತ್ತು ನೀರು ಕೂಡ ಇಲ್ಲದೆ ಬಸವಳಿದಿದ್ದ ತಂಡದ ಎಲ್ಲರೂ ಪೋಲೆಂಡ್ ನಲ್ಲಿ ವೈದ್ಯಕೀಯ ನೆರವು, ಖಾಸಗಿ ಹೊಟೇಲ್ ನಲ್ಲಿ ತಂಗಲು ವ್ಯವಸ್ಥೆ ಎಲ್ಲವನ್ನೂ ಅನುಭವಿಸಿದ್ದಾರೆ. ವೈದ್ಯಕೀಯ ನೆರವು ಕೂಡ ಅಲ್ಲಿ ಕೇಂದ್ರ ಸರಕಾರದ ವತಿಯಿಂದ ಅವರಿಗೆ ಲಭಿಸಿದೆ. ಇದೀಗ ಅವರು ದೆಹಲಿ ತಲುಪಿದ್ದು ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಮಂಗಳೂರಿಗೆ ಬರಲಿದ್ದಾರೆ. ಪೋಲೆಂಡ್ ಏರ್ಪೋರ್ಟ್ ತಲುಪುವ ಮನ್ನ ಹೀನಾ ಫಾತಿಮಾ ಅವರು, ಮಾವ ಆಬಿದ್ ಅಲಿ ಮತ್ತು ತಾಯಿ ಸಹನಾ ಜೊತೆ  ಮಾತನಾಡಿದ್ದು, ನಾವು ಅಪಾಯದಿಂದ ಸಂಪೂರ್ಣ ಪರಾಗಿದ್ದೇವೆ ಎಂದು ಮಾಹಿತಿ ನೀಡಿದ್ದರು.

ಮ್ಯಾಟ್;

ನನ್ನ ತಂಗಿಯ ಮಗಳ ಹಾಗೆ ಈ ದೇಶದ ಎಷ್ಟೋ ಅಕ್ಕ ತಂಗಿಯರ ಮಕ್ಕಳು ಉಕ್ರೇನ್ ನಲ್ಲಿ ಸಿಲುಕಿ ಕೊಂಡಿದ್ದಾರೆ. ಕೆಲವರು ರಷ್ಯಾ ದಾಳಿಗೂ ಒಳಗಾಗಿದ್ದಾರೆ ಎಂಬುದು ಖೇದದ ವಿಚಾರ. ಅವರೆಲ್ಲರೂ ಪ್ರಾಣಾಪಾಯಕ್ಕೊಳಗಾಗದೆ ಈ ದೇಶಕ್ಕೆ ಬಂದು ಅವರ ಕುಟುಂಬವನ್ನು ಸೇರಲಿ ಎಂದು  ದೇವರಲ್ಲಿ ಪ್ರಾರ್ಥಿಸುತ್ತೇವೆ.


ಆಬಿದ್ ಅಲಿ.

(ಹೀನಾ ಫಾತಿಮಾ ಮಾವಾ)

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment