Posts

ಕಾಜೂರು ಉರೂಸ್ ಪ್ರಯುಕ್ತ ಜನಪ್ರತಿನಿಧಿ ಸಂಗಮ

0 min read

ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಫೆ.26 ರಂದು ಜನಪ್ರತಿನಿಧಿ ಸಂಗಮ ಕಾರ್ಯಕ್ರಮ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.ವಕ್ಫ್ ಜಿಲ್ಲಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ, ಎಸ್‌ಎಮ್‌ಆರ್ ಬಿಲ್ಡರ್ಸ್ ಮಾಲಿಕ ರಶೀದ್ ಹಾಜಿ ಉದ್ಘಾಟಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳಾದ ರಾಜೇಶ್, ಸೂರಜ್ ವಳಂಬ್ರ, ಸತೀಶ್, ಆನಂದ, ಕೆ.ಯು ಮುಹಮ್ಮದ್, ಅಹ್ಮದುಲ್ ‌ಕಬೀರ್ ಕಾಜೂರು ಇವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಹಾಜಿ ಬಿ.ಹೆಚ್ ಅಬೂಬಕ್ಕರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮಾಜಿ ಅಧ್ಯಕ್ಷರುಗಳಾದ ಉಮರ್ ಸಖಾಫಿ ಮತ್ತು ಶೇಕಬ್ಬ ಕುಕ್ಕಾವು, ಕೆ‌.ಎಮ್ ಅಬೂಬಕ್ಕರ್ ಕುಕ್ಕಾವು, ಬದ್ರುದ್ದೀನ್ ಕಾಜೂರು, ಎ.ಯು ಮುಹಮ್ಮದ್ ಅಲಿ ಮೊದಲಾದವರು ಉಪಸ್ಥಿತರಿದ್ದರು. ಕಿಲ್ಲೂರು ಜಮಾಅತ್ ಮಾಜಿ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ ಸ್ಬಾಗತಿಸಿದರು. ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment