Posts

ಕಾಜೂರು ದರ್ಗಾದ ನವೀಕೃತ ಆಡಳಿತದ‌ ಕಚೇರಿ ಉದ್ಘಾಟನೆ

1 min read



ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ನ 2022 ನೇ ಸಾಲಿನ ಉರೂಸ್ ಮಹಾ ಸಂಭ್ರಮದ ಉದ್ಘಾಟನೆಯ ಜೊತೆಗೆ, ನವೀಕರಣಗೊಂಡ ಆಡಳಿತ ಕಚೇರಿಯ ಉದ್ಘಾಟನೆ ಫೆ.18 ರಂದು ನಡೆಯಿತು. 

ಕಾಜೂರು ಶಿಕ್ಷಣ‌ ಸಂಸ್ಥೆಗಳ ಪ್ರಾಚಾರ್ಯ ಹಾಗೂ ಧರ್ಮಗುರುಗಳಾದ ಸಯ್ಯಿದ್ ಕಾಜೂರು ತಂಙಳ್  ರಿಬ್ಬನ್ ಕತ್ತರಿಸಿ ಉದ್ಘಾಟನೆ ನೆರವೇರಿಸಿ ದುಆ ನಡೆಸಿದರು. 

ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ ಅವರು ಮಾತನಾಡಿ,‌ ಕಾಜೂರು‌ ಕ್ಷೇತ್ರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪೈಕಿ ಸರ್ವಧರ್ಮೀಯ ವಲಯದಲ್ಲಿ  ಗುರುತಿಸಲ್ಪಟ್ಟಿದೆ. ಇಲ್ಲಿ ಶಿಕ್ಷಣ ಸಂಸ್ಥೆ, ಆಡಳಿತ ವ್ಯವಸ್ಥೆ ಎಲ್ಲವೂ ಉತ್ತಮವಾಗಿದೆ. ಕಾಜೂರು ಕಿಲ್ಲೂರು ಜಮಾಅತರು ಜೊತೆಯಾಗಿ ಸಮಿತಿ ರಚಿಸಿಕೊಂಡು ಸೌಹಾರ್ಯದತೆಯೊಂದಿಗೆ  ಉರೂಸ್ ನಡೆಸುತ್ತಿರುವುದು ಉತ್ತಮ‌ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು. ವೇದಿಕೆಯಲ್ಲಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಬಿ.ಹೆಚ್ ಅಬೂಬಕ್ಕರ್ ಹಾಜಿ, ಜೊತೆ ಕಾರ್ಯದರ್ಶಿ ಅಶ್ರಫ್  ಕಿಲ್ಲೂರು, ಕಾಜೂರು ಆಡಳಿತ ಮಂಡಳಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್,‌ ನಿರ್ದೇಶಕರಾದ ಬದ್ರುದ್ದೀನ್ ಮತ್ತು ಮುಹಮ್ಮದ್ ಆಲಿ, ಆರ್‌ಡಿಸಿ ಅಧ್ಯಕ್ಷ ಮುಹಮ್ಮದ್ ಶರೀಫ್, ಹಾಗೂ ಜಂಟಿ ಜಮಾಅತ್ ಗಳ ಪದಾಧಿಕಾರಿಗಳು, ಸಮಿತಿ ಸದಸ್ಯರು, ಗ್ರಾ.ಪಂ ಸದಸ್ಯ ಶಾಹುಲ್ ಹಮೀದ್, ಪ್ರಮುಖರಾದ ಅಬೂಬಕ್ಕರ್ ಮಲ್ಲಿಗೆ, ಮುಹಮ್ಮದ್ ಕಿಲ್ಲೂರು, ಕಚೇರಿ ವ್ಯವಸ್ಥಾಪಕ ಶಮೀರ್ ಉಪಸ್ಥಿತರಿದ್ದರು. 

ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಸ್ವಾಗತಿಸಿ ಪ್ರಸ್ತಾಪಿಸಿದರು. ಕಿಲ್ಲೂರು ಮಾಜಿ ಅಧ್ಯಕ್ಷ ಎಮ್. ಎ ಕಾಸಿಂ ಮಲ್ಲಿಗೆಮನೆ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment