Posts

ರಸ್ತೆ ಅಪಘಾತಕ್ಕೆ ಬಲಿಯಾದ ಚಾರ್ಮಾಡಿಯ ಬಿಲ್ಲವ ಮುಖಂಡ

1 min read


ಬೆಳ್ತಂಗಡಿ; ತಾಲೂಕು ಶ್ರೀ  ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ, ಸಾಮಾಜಿಕ ಮುಂದಾಳು ದಯಾನಂದ ಪೊಂಗರ್ದಡಿ (47ವ)  ಅವರು ಜ.15 ರಂದು ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ‌. ಈ ಸಂದರ್ಭ ಅವರ ಸಹಸವಾರೆಗೆ ಅಲ್ಪ ಗಾಯವಾಗಿದೆ.

ಚಾರ್ಮಾಡಿಯ ಸುಣ್ಣದ ಗೂಡು ಎಂಬಲ್ಲಿ ಖಾಸಗಿ ಬಸ್ ಮತ್ತು ಇವರ ಬೈಕ್ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಅವರು ಅಸುನೀಗಿದ್ದಾರೆ.

ಅಪಘಾತದ ರಭಸಕ್ಕೆ ದಯಾನಂದ ಅವರಿಗೆ ತೀವ್ರತರದ ಗಾಯಗಳಾದುದೂ ಮಾತ್ರವಲ್ಲದೆ ಕಾಲು ಸಂಪೂರ್ಣ ಜರ್ಝರಿತಗೊಂಡಿದ್ದು ತೀವ್ರ ರಕ್ತಸ್ರಾವ ಕ್ಕೆ ಕಾರಣವಾಯಿತು. ವಿಚಾರ ಅರಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಾರ್ಮಾಡಿ ಗ್ರಾ.ಪಂ ಎಸ್‌ಡಿಪಿಐ ಬೆಂಬಲಿತ ಸದಸ್ಯ ಸಿದ್ದೀಕ್ ಚಾರ್ಮಾಡಿ,‌ ಪ್ರಮುರಾದ ಅಶ್ರಫ್ ಚಾರ್ಮಾಡಿ, ಸಾದಿಕ್ ಚಾರ್ಮಾಡಿ ಇವರು ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ‌. ಆ ಬಳಿಕ ಅವರನ್ನು ತುರ್ತು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ದಾರಿ ಮಧ್ಯೆ ಅಸುನೀಗಿದ್ದಾರೆ.

ದಯಾನಂದ್ ಅವರು ಕಕ್ಕಿಂಜೆಯಲ್ಲಿರುವ ಕೋಳಿ ಅಂಗಡಿಯಲ್ಲಿದ್ದರು. ಅಲ್ಲಿಂದ ಚಾರ್ಮಾಡಿಯಲ್ಲಿ ಇದ್ದ ಮೀಟಿಂಗ್ ಒಂದಕ್ಕೆ ಸಂಬಂಧಿಸಿದಂತೆ ಅವರು ತನ್ನ ಪುತ್ರನೇ ಕಳಿಸಿಕೊಟ್ಟ ಬೈಕಿನಲ್ಲಿ ಆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅವರ ಪರಿಚಿತರೇ ಆಗಿರುವ, ಶ್ವೇತಾ ಕೇಂಟೀನ್ ನಲ್ಲಿ ಕೆಲಸ‌ನಿರ್ವಹಿಸುವ ಮಹಿಳೆಯೊರ್ವರನ್ನೂ ಅವರು ಜೊತೆ ಕರೆದುಕೊಂಡು ಹೋಗುತ್ತಿದ್ದರು. ಅಪಘಾತದ ವೇಳೆ ಸಹಸವಾರೆ ಮಹಿಳೆಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇವರಿಗೆ ಅಪಘಾತ ಎಸಗಿದ ಬಸ್ಸು ಚಿಕ್ಕಮಗಳೂರಿನದ್ದೆಂದು ತಿಳಿದುಬಂದಿದೆ. ವಿವಾಹ ಸಮಾರಂಭದ ಬಾಡಿಗೆಗಾಗಿ ಅವರು ಈ ಕಡೆ ಬಂದಿದ್ದರು. ಅದರ ಚಾಲಕ ಮದ್ಯ ಸೇವಿಸಿದ್ದರು.‌ ಅವರು ಸೇವಿಸಿ ಉಳಿದ ಅರ್ಧ ಬಾಟಲಿ‌ ಮದ್ಯ ಬಸ್ಸಿನಲ್ಲಿ ಪತ್ತೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ದಯಾನಂದ ಅವರು ಯುವ ಸಂಘಟಕರಾಗಿ ಗುರುತಿಸಿಕೊಂಡಿದ್ದಲ್ಲದೆ, ಯುವವಾಹಿನಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.

ಅವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ ಅವರು ಆಗಮಿಸಿ ಮೃತದೇಹದ ಅಂತಿಮದರ್ಶನ ಪಡೆದು ಮನೆಯವರಿಗೆ ಸಾಂತ್ವಾನ ಹೇಳಿದರು. 

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು‌ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment