ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮುರ ನಾವೂರು ಇದರ ಅಧ್ಯಕ್ಷ ಹಸೈನಾರ್ ಎನ್.ಕೆ ಹಾಗು ಎಸ್ಸೆಸ್ಸೆಫ್ ನಾವೂರು ಯುನಿಟ್ ಅಧ್ಯಕ್ಷ ಇಬ್ರಾಹಿಂ ಪಿ.ಎ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮವನ್ನು ದುಆಃ ಮೂಲಕ ಮಸ್ಜಿದ್ ಖತೀಬ್ ಹಮೀದ್ ಸಖಾಫಿ ಉಧ್ಘಾಟಿಸಿದರು. ಸದರ್ ಉಸ್ತಾದರಾದ ಆದಂ ಮದನಿಯವರು ಸಂದೇಶ ಭಾಷಣ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿದ್ದ ಅಲಿಕುಂಞಿ ಸಖಾಫಿ ನಾವೂರು, ಮುಹಮ್ಮದ್ ಮುಸ್ಲಿಯಾರ್ ನಿಂರ್ದಿ, ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಹಿಮಮಿ ನಾವೂರು, ಶರೀಫ್ ಸಖಾಫಿ ಕನ್ಯಾಡಿ, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸದಸ್ಯ ಶರೀಫ್ ನಾವೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ಡಿ.ಎಮ್, ಎಮ್.
ಜೆ.ಎಮ್ ಮುರ ಕಾರ್ಯದರ್ಶಿ ಅಬೂಬಕರ್ ಪಿ.ಯು, ಡಿವಿಷನ್ ಸದಸ್ಯ ಸುಲೈಮಾನ್ ಪಿ.ವೈ, ಬದ್ರುಲ್ ಹುದಾ ಗಲ್ಫ್ ಸಮಿತಿ ಇದರ ಉಪಾಧ್ಯಕ್ಷ ಸಿದ್ದೀಕ್ ಕೈಕಂಬ, ನಾವೂರು ಗ್ರಾ.ಪಂ ಪಿ.ಡಿ.ಒ ವೆಂಕಟ ಕ್ರಷ್ಣರಾಜ್, ಕಾರ್ಯದರ್ಶಿ ಮೋನಮ್ಮ, ಉಪಾಧ್ಯಕ್ಷೆ ಸುನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುನಿಟ್ ಕೋಶಾಧಿಕಾರಿ ಆಶಿಕ್ ಸಖಾಫಿ ಸ್ವಾಗತಿಸಿ, ಯುನಿಟ್ ಕಾರ್ಯದರ್ಶಿ ಸಿದ್ದೀಕ್ ಕೋಡಿಕನ್ನಾಜೆ ಧನ್ಯವಾದವಿತ್ತರು.