Posts

ಒಕ್ಕಲೆಬ್ಬಿಸುವ ನೆಪದಲ್ಲಿ ಅಸ್ಸಾಂ ನ ಅಮಾಯಕ ಮುಸ್ಲಿಮರ ಹತ್ಯೆ: ಎಸ್ ಡಿ ಪಿ ಐ ಕುವೆಟ್ಟು ಬ್ಲಾಕ್ ವತಿಯಿಂದ ಪ್ರತಿಭಟನೆ

1 min read

ಬೆಳ್ತಂಗಡಿ; ಒಕ್ಕಲೆಬ್ಬಿಸುವ ನೆಪದಲ್ಲಿ  ಅಸ್ಸಾಮಿನಲ್ಲಿ ಸರಕಾರದ ಕುಮ್ಮಕ್ಕಿನಿಂದ ಪೋಲೀಸರು  ಅಮಾಯಕ ಮುಸ್ಲಿಮರನ್ನು ಹತ್ಯೆ ನಡೆಸಿರುವುದನ್ನು ಖಂಡನೀಯ ಎಂದು ಎಸ್ ಡಿ ಪಿ ಐ ಕುವೆಟ್ಟು ಬ್ಲಾಕ್ ಸಮಿತಿ ಹೇಳಿದೆ. ಶನಿವಾರ ಸುನ್ನತ್ ಕೆರೆ ಎಸ್ಡಿಪಿಐ ಬಸ್ ಪರಿಸರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಕ್ಷದ ನಾಯಕರು ಈ‌ಬಗ್ಗೆ ಖಂಡಿಸಿ ಮಾತನಾಡಿದರು.

ಎಸ್‌ಡಿಪಿಐ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ನವಾಝ್ ಕಟ್ಟೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ ನೇತ್ರತ್ವದಲ್ಲಿ ನಡೆಯಿತು. 
ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್  ಫ್ರಾಂಕೋ , ಎಸ್. ಡಿ. ಪಿ. ಐ ಕುವೆಟ್ಟು ಬ್ಲಾಕ್ ಅಧ್ಯಕ್ಷ ಅಶ್ಪಾಕ್ ಪುಂಜಾಲಕಟ್ಟೆ, ಕಾರ್ಯದರ್ಶಿ ಶಮೀಮ್ ಕಟ್ಟೆ, ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ದಾವೂದ್ ಜಿ.ಕೆ, ಕಾರ್ಯದರ್ಶಿ ಕಲಂದರ್ ಬಿ.ಎಚ್, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ಶಮೀರ್ ಸುನ್ನತ್ ಕೆರೆ ಹಾಗೂ ಸುನ್ನತ್ ಕೆರೆ ವಾರ್ಡ್ ಅಧ್ಯಕ್ಷ ಇಸಾಕ್ ಪಿ.ಎಸ್.ಕೆ. ಮತ್ತಿತರು ಉಪಸ್ಥಿತರಿದ್ದರು. ಪೆರಾಲ್ದ ಕಟ್ಟೆ ಪಂಚಾಯತ್ ಸದಸ್ಯ ನಿಝಾಮ್‌ ಕಟ್ಟೆ  ಸ್ವಾಗತಿಸಿ ವಂದಿಸಿದರು.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment