Posts

ಎಸ್‌ಡಿಪಿಐ ತಾಲೂಕು ಅಧ್ಯಕ್ಷರಾಗಿ ನಿಸಾರ್ ಕುದ್ರಡ್ಕ;ಕಾರ್ಯದರ್ಶಿಯಾಗಿ ನಿಝಾಮ್ ಗೇರುಕಟ್ಟೆ ಆಯ್ಕೆ

1 min read

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 2021-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ 

ನಡೆದು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ನಿಸಾರ್ ಕುದ್ರಡ್ಕ, ಕಾರ್ಯದರ್ಶಿಯಾಗಿ ನಿಝಾಮ್ ಗೇರುಕಟ್ಟೆ, ಕೋಶಾಧಿಕಾರಿಯಾಗಿ ಸ್ವಾಲಿ ಮದ್ದಡ್ಕ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಉಪಾಧ್ಯಕ್ಷರಾಗಿ ಹನೀಫ್ ಪುಂಜಾಲಕಟ್ಟೆ,  ಜೊತೆ ಕಾರ್ಯದರ್ಶಿಗಳಾಗಿ ಫಝಲ್ ರಹ್ಮಾನ್ ಉಜಿರೆ ಮತ್ತು ಸಾದಿಕ್ ಲಾಯಿಲಾ ಆಯ್ಕೆಯಾದರು.

ಸದಸ್ಯರಾಗಿ ಇನಾಸ್ ರೋಡ್ರಿಗಸ್, ನವಾಝ್ ಶರೀಫ್ ಕಟ್ಟೆ, ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು, ಹನೀಫ್ ಟಿ.ಎಸ್, ಹೈದರ್ ನೀರ್ಸಾಲ್ ಇವರನ್ನು ಆರಿಸಲಾಯಿತು.

ಚುನಾವಣಾ ಅಧಿಕಾರಿಗಳಾಗಿ ಜಿಲ್ಲಾ ಕಾರ್ಯದರ್ಶಿ ಅಶ್ರಪ್ ಮಂಚಿ, ಜಮಾಲ್ ಜೋಕಟ್ಟೆ, ಅನ್ವರ್ ಸಾದಾತ್ ಬಜತ್ತೂರು ಆಗಮಿಸಿದ್ದರು.

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮುಖ್ಯ ಅತಿಥಿಯಾಗಿ ಭಾಗವಹಿಸಿರು. ನಿಕಟ ಪೂರ್ವ ಅಧ್ಯಕ್ಷ ಹೈದರ್ ನೀರ್ಸಾಲ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿಯವರು ಮೂರು ವರ್ಷದ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ನಿಝಾಮ್ ಗೇರುಕಟ್ಟೆ ಸ್ವಾಗತಿಸಿ, ಅಶ್ಫಕ್ ಪುಂಜಲ್ ಕಟ್ಟೆ ವಂದಿಸಿದರು. ರವೂಫ್ ಪುಂಜಲ್ ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment