ಬೆಳ್ತಂಗಡಿ;ಕಳೆದ ಎರಡು ದಿನಗಳ ಮಳೆಯ ಪರಿಣಾಮವಾಗಿ ನಿಡಿಗಲ್ ಸಮೀಪ ಎಸ್ ವೈ ಎಸ್ ಕಾರ್ಯಕರ್ತ ಕಾಸಿಂ ಎಂಬವರ ಮನೆಯ ತಡೆಗೋಡೆ ಕುಸಿದು ಸಮಸ್ಯೆ ಉಂಟಾದಾ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಸಹಾಯಿ ತಂಡದ ಕಾರ್ಯಕರ್ತರು ತಕ್ಷಣ ಕಾರ್ಯಪ್ರವೃತ್ತರಾಗಿ ಇದನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಹಕಾರಿಯಾದರು.
ಈ ಕಾರ್ಯಾಚರಣೆಯಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರಾದ ಅಬ್ದುಲ್ಲ ನೆಕ್ಕರೆ ಮುಂಡಾಜೆ, ಶಾಕಿರ್ ಉಜಿರೆ, ಅಶ್ರಫ್ ಎಂ.ಎಚ್, ಹಂಝ ಎಂ.ಎಚ್, ಕಬೀರ್ ಹಳೇಪೇಟೆ, ಮಿಸ್ಬಾ, ಆಸಿಫ್, ಅಝೀಮ್, ರಮ್ಲಾ ನೆಕ್ಕರೆ ಮುಂಡಾಜೆ, ಮಜೀದ್ ಚಿಕನ್ ಹಾಗೂ ನಿಡಿಗಲ್ ಯುನಿಟ್ ಕಾರ್ಯಕರ್ತರು ಭಾಗಿಯಾದರು.
ಸಕಾಲಿಕವಾಗಿ ಈ ಕಾರ್ಯಕರ್ತರು ಸ್ಪಂದಿಸಿದ್ದರಿಂದ ಕಾಸಿಂ ಅವರ ಮನೆಗೆ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿತು.