ಬೆಳ್ತಂಗಡಿ; ನಡ ಗ್ರಾಮದ ಕುತ್ರೊಟ್ಟು ದೇವರ ಗುಂಡಿ ಎಂಬಲ್ಲಿ ಸ್ನೇಹಿತರ ಜೊತೆ ಸ್ನಾನಕ್ಕೆ ಹೋಗಿದ್ದ ಯುವಕ ನಬಾನ್ (22) ಅವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಕಾಶಿಬೆಟ್ಟು ಟಿಬಿ ಕ್ರಾಸ್ ಬಳಿಯ
ಇಸ್ಮಾಯಿಲ್ ಅವರ ಪುತ್ರ ನವಾಬ್ ಅವರು ಇನ್ನಿಬ್ಬರು ಸಂಗಡಿಗರ ಜೊತೆ ನದಿಗೆ ಸ್ನಾನಕ್ಕೆ ಹೋಗಿದ್ದರು. ಈ ವೇಳೆ ಅಪಾಯಕ್ಕೆ ಸಿಲುಕಿದ ನವಾಬ್ ಅವರನ್ನು ರಕ್ಷಿಸಲು ಒಬ್ಬಾತ ಯತ್ನಿಸಿದ್ದರೂ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮೇಲಕ್ಕೆತ್ತಿ ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಇದೀಗ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಅವರ ಜೊತೆ ನದಿಗೆ ಹೋಗಿದ್ದ ಸಂಗಡಿಗರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆನ್ನಲಾಗಿದೆ.