Posts

1 ಸಾವಿರ ಕಾರ್ಯಕ್ರಮ ಆಯೋಜಿಸುವ ಮೂಲಕ‌ ಬೆಳ್ತಂಗಡಿ ರೋಟರಿ ಕ್ಲಬ್ ರಾಷ್ಟ್ರಮಟ್ಟದಲ್ಲಿ ಗುರುತಿಸಿದೆ; ಬಿ.ಕೆ ಧನಂಜಯ ರಾವ್ ಜು.1 ರಂದು ವರ್ಚುವಲ್ ಮೂಲಕ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

1 min read

ಬೆಳ್ತಂಗಡಿ: ಸುವರ್ಣ ಮಹೋತ್ಸವ ವರ್ಷದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ ಕೋವಿಡ್ ಎರಡನೇ ಅಲೆಯ ಹೊಡೆತದ ಅನೇಕ ಸಮಸ್ಯೆ ಸವಾಲುಗಳ ಮಧ್ಯೆಯೂ ಜನಪರವಾದ 1 ಸಾವಿರದಷ್ಟು  ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದಲ್ಲಿ ರೋಟರಿ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಅತೀ ಹೆಚ್ಚು ಕಾರ್ಯಕ್ರಮ ಸಂಘಟಿಸಿದ ಕ್ಲಬ್ ಎಂದು ಗುರುತಿಸಿಕೊಂಡಿದೆ. ಜೊತೆಗೆ ರೋಟರಿ ನ್ಯೂಸ್ ರಾಷ್ಟ್ರೀಯ ಪತ್ರಿಕೆಯಲ್ಲಿ ಬೆಳ್ತಂಗಡಿ ಕ್ಲಬ್ಬಿನ ಕಾರ್ಯಕ್ರಮಗಳ 6 ಪುಟದ ವರದಿ ಬಂದಿರುವುದು ಸಂಘಟಿತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಎಂದು ರೋಟರಿ ಕ್ಲಬ್ ಅಧ್ಯಕ್ಷ, ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಅವರು ಹೇಳಿದರು.

ಬೆಳ್ತಂಗಡಿ ಎಸ್‌ಡಿಎಂ ಪಿನಾಕಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರಿನ ಸ್ಥಾಪಕ ಪ್ರಾಂಶುಪಾಲರು ಹಾಗೂ ಹಿರಿಯ ನ್ಯಾಯವಾದಿ ಎನ್ ಜೆ. ಕಡಂಬ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ರೋಟರಿ ಕ್ಲಬ್ ಬೆಳ್ತಂಗಡಿ ಇದೀಗ ಸುವರ್ಣ ಮಹೋತ್ಸವ ವರ್ಷದಲ್ಲಿದೆ. ರೋಟರಿ ಕ್ಲಬ್‌ನ ಗೌರವ ಸದಸ್ಯರಾದ ಡಾ | ಡಿ . ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ | ಬಿ ಯಶೋವರ್ಮರವರ ಸಹಕಾರದೊಂದಿಗೆ ಹಾಗೂ ಪೂರ್ವಾಧ್ಯಕ್ಷರುಗಳ ಕಾರ್ಯದರ್ಶಿಗಳು ಹಾಗೂ ಸದಸ್ಯರ ಸಹಯೋಗದೊಂದಿಗೆ ರೋಟರಿ ಕ್ಲಬ್ ಬೆಳ್ತಂಗಡಿ , ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 50 ವರ್ಷಗಳಲ್ಲಿ ಹತ್ತು ಹಲವು ಸೇವಾ ಕಾಠ್ಯಕ್ರಮಗಳನ್ನು ಸಂಘಟಿಸಿರುತ್ತದೆ   ಎಂದರು.


ಈ ಬಾರಿ 2021 22 ನೇ ಸಾಲಿನಲ್ಲಿ SERVE TO CHANGE LIVES ( ಪರಿವರ್ತನೆಗಾಗಿ ಸೇವೆ ) ಎಂಬ ಧೈಯ ವಾಕ್ಯದಡಿಯಲ್ಲಿ ಸಮುದಾಯ ಸೇವೆ , ವೃತ್ತಿಪರ ಸೇವ , ಯುವಜನ ಸೇವೆ , ಅಂತರಾಷ್ಟ್ರೀಯ ಸೇವೆ , ಕ್ಲಬ್ ಸೇವೆ ಹಾಗೂ ಪರಿಸರ ಸೇವೆಯ ಅಡಿಯಲ್ಲಿ 51 ನೇ ಅಧ್ಯಕ್ಷರಾಗಿ ಶರತ್ ಕೃಷ್ಣಪಕ್ವೆಟ್ನಾಯ ಹಾಗೂ ಕಾಠ್ಯದರ್ಶಿಯಾಗಿ ಅಬೂಬಕ್ಕರ್ ಯು . ಎಚ್ . ಯವರು ಸೇವೆಯನ್ನು ನೀಡಲಿದ್ದು , ರೋಟರಿ ಕ್ಲಬ್ ಬೆಳ್ತಂಗಡಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.1 ರಂದು ವರ್ಚುವಲ್ ಮೂಲಕ ನೆರವೇರಲಿದೆ ಎಂದರು.

2022-23ನೇ ಸಾಲಿನ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಆಗಿರುವ ಪ್ರಕಾಶ್ ಕಾರಂತ್ ಪದಗ್ರಹಣ ಅಧಿಕಾರಿಯಾಗಿ , ಮುಖ್ಯ ಅತಿಥಿಗಳಾಗಿ ಸಹಾಯಕ ರೋಟರಿ ಜಿಲ್ಲಾ ಗವರ್ನರ್ ಸುರೇಂದ್ರ ಕಿಣಿ , ಹಾಗೂ ನಿಕಟಪೂರ್ವ ಸಹಾಯಕ ಗವರ್ನರ್ ಪ್ರತಾಪ ಸಿಂಹ ನಾಯಕ್ ಇವರು ಭಾಗವಹಿಸಲಿದ್ದಾರೆ ಎಂದರು.


ಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಕಾರ್ಯದರ್ಶಿ ಶ್ರೀಧರ ಕೆ.ವಿ, ನಿಯೋಜಿತ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿ ಅಬೂಬಕ್ಕರ್, ಪೂರ್ವಾಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment