ಬೆಳ್ತಂಗಡಿ; ಮುಹುಯುದ್ದೀನ್ ಜುಮಾ ಮಸೀದಿ ಕಕ್ಕಿಂಜೆ, ಎಸ್ಕೆಎಸ್ಸೆಸ್ಸೆಫ್ ಕಕ್ಕಿಂಜೆ ಶಾಖಾ ವತಿಯಿಂದ ನಡೆಸಲ್ಪಡುವ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಮತ್ತು ಮಜ್ಲಿಸುನ್ನೂರು ಕಾರ್ಯಕ್ರಮ ಫೆ. 17 ಮತ್ತು 18 ರಂದು ಮರ್‌ಹೂಮ್ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ದ.ಕ ಖಾಝಿ, ಸಮಸ್ತ ಕೇಂದ್ರ ಸಮಿತಿ ಸದಸ್ಯ ತ್ವಾಖಾ ಉಸ್ತಾದ್ ಉಧ್ಘಾಟಿಸಲಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ, ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯಭಾಷಣ ಮಾಡಲಿದ್ದಾರೆ.
ಸ್ಥಳೀಯ ಖತೀಬ್ ಸಂಶುದ್ದೀನ್ ಅಶ್ರಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಶಾಸಕ ಯುಟಿ ಖಾದರ್, ಮಾಜಿ ಶಾಸಕ ಮೊಯಿದೀನ್ ಬಾವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.18 ರಂದು ಅಧ್ಯಾತ್ಮಿಕ ಕಾರ್ಯಕ್ರಮವಾದ ಮಜ್ಲಿಸುನ್ನೂರ್ ಗೆ ಸಯ್ಯಿದ್ ಕುಂಬೋಲ್ ಅಲೀ ತಂಙಳ್ ನೇತ್ರತ್ವ ನೀಡಲಿದ್ದಾರೆ.
ಅಡ್ವಕೇಟ್ ಹನೀಫ್ ಹುದವಿ,ಐ.ಕೆ ಮೂಸಾ ದಾರಿಮಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಅಧ್ಯಕ್ಷ ನಝೀರ್ ಅಝ್ಹರಿ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.