Posts

ರಾಷ್ಟ್ರದ್ರೋಹ ಆರೋಪದಲ್ಲಿ ಶಂಕಿತ ಮೂವರ ಬಂಧನ- ವಿಚಾರಣೆ

1 min read

ಬೆಳ್ತಂಗಡಿ; ಉಜಿರೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವ ಪ್ರಕರಣಕ್ಕೆ  ಸಂಬಂಧಿಸಿ ಶಂಕಿತ ಮೂವರನ್ನು ಬೆಳ್ತಂಗಡಿ ಪೊಲೀಸರು ಇಂದು ಬೆಳಿಗ್ಗೆ ವಶಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಎಸ್‌ಡಿಪಿಐ ಪಕ್ಷದ ಬೆಂಬಲಿತರು ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಲಾದ ಬಗ್ಗೆ  ವೀಡಿಯೋ ವೈರಲಾದ ಹಿನ್ನೆಲೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ.

ಕುವೆಟ್ಟು ಗ್ರಾಮದ  ಪಿಲಿಚಂಡಿಕಲ್ಲು ನಿವಾಸಿಗಳಾದ ಮೊಹಮ್ಮದ್ ಹರ್ಷದ್ (22 ವ.), ದಾವೂದ್ (36ವ.) ಹಾಗೂ ಇಸಾಕ್ (28ವ.) ಎಂಬವರೇ ಬಂಧಿತರು.

ಪೊಲೀಸರಿಗೆ ಸಿಕ್ಕಿರುವ ವೀಡಿಯೋಗಳನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಸದರಿ ವೀಡಿಯೋವನ್ನು ಹೊರತುಪಡಿಸಿ ಈ ಘಟಣೆಗೆ ಸಂಬಂಧಿಸಿದ ಮೊಬೈಲ್ ಮೂಲಕ ಚಿತ್ರೀಕರಿಸಲಾದ ಇತರ ಎರಡು ವೀಡಿಯೊಗಳೂ ಪೊಲೀಸರಿಗೆ ಲಭ್ಯವಾಗಿದ್ದು ಅವುಗಳನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ‌.

ಪ್ರಕರಣದ ತನಿಖೆಯ ಆಧಾರದಲ್ಲಿ ಹಾಗೂ ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ಅಧಾರದಲ್ಲಿ ಮೂವರನ್ನು  ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.

ಠಾಣೆಯ ಎದುರು ಜಮಾಯಿಸಿದ ಎಸ್‌ಡಿಪಿಐ ಬೆಂಬಲಿಗರು;

ಪೊಲೀಸರು ಮೂವರನ್ನು ಬಂಧಿಸುತ್ತಿದ್ದಂತೆ ಠಾಣೆಯ ಬಳಿ ಬಂಧಿತರ ಮನೆಯವರು, ಹಾಗೂ ಪಕ್ಷದ ಮುಖಂಡರು ಮತ್ತು ಬೆಂಬಲಿಗರು ಜಮಾಯಿಸಿದ್ದರು. 

ಘಟನೆಗೆ ಸಂಬಂಧಿಸಿ ಅಮಾಯಕರನ್ನು ಬಂಧಿಸಬಾರದು‌. ಅವರ ಮೇಲೆ ವ್ಯಥಾ ಪ್ರಕರಣ ದಾಖಲಿಸಬಾರದು ಮತ್ತು ಎಸ್‌ಡಿಪಿಐ ಬೆಂಬಲಿತರೆಂಬ ಕಾರಣಕ್ಕಾಗಿ ನಿನ್ನೆ ಸ್ಥಳದಲ್ಲೇ ಇರದವರನ್ನು ಬಂಧಿಸಬಾರದು ಎಂದು ಪಕ್ಷದ ಅಧ್ಯಕ್ಷ ಹೈದರ್ ನೀರ್ಸಾಲ್ ಹೇಳಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment