Posts

ಸಮಯ ಮರೆಯುವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು; ಗರ್ಭಿಣಿ ಮಹಿಳೆಯರು ಹಾಗೂ ಕುಟುಂಬಸ್ತರ ಆಕ್ರೋಶ

1 min read



ಬೆಳ್ತಂಗಡಿ: ಗುರುವಾರ ದಿವಸ ಬೆಳ್ತಂಗಡಿ ಸರಕಾರಿ ಅಮುದಾಯ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರ ತಪಾಸಣೆಯ ದಿವಸವಾಗಿದ್ದು ತಾಲೂಕಿನ‌ ಮೂಲೆ ಮೂಲೆಗಳಿಂದ ಫಲಾನುಭವಿಗಳು ಆಗಮಿಸಿ ಸರತಿಸಾಲಿನಲ್ಲಿ‌ ನಿಂತಿದ್ದರೆ ವೈದ್ಯರು ಮಾತ್ರ ಸಮಯಕ್ಕೆ ಸರಿಯಾಗಿ ಬರಲೇ ಇಲ್ಲ.  ವೈದ್ಯರ ಭೇಟಿಗಾಗಿ ಬೆಳಗ್ಗೆ 9 ಗಂಟೆಯಿಂದ ಗರ್ಭಿಣಿ ಮಹಿಳೆಯರು ಬಾಗಿಲು ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ..

ಅನೇಕ  ತುಂಬು ಗರ್ಭಿಣಿ ಮಹಿಳೆಯರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ನಂಬರ್ 16 ರಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಜಾಗದಲ್ಲಿ ನಿಯೋಜಿತ ವೈದ್ಯೆ ಸೇವೆ ನೀಡಬೇಕಾಗಿದ್ದು, ಇವರು ರೋಗಿಗಳಿಗೆ ಬೆಳಗ್ಗೆ 10 ಗಂಟೆಗೆ ಬರಲು ಸೂಚಿಸುತ್ತಾರೆ. ಆದರೆ  ಡಾಕ್ಟರ್ ಮಾತ್ರ ಅವರ ಟೈಮ್ ಗೆ, ಅಂದ್ರೆ 10:30 ನಂತರವೇ ಬರೋದು. 

ಗುರುವಾರ ಮತ್ತೂ ತಡವಾಗಿ 10:43 ಕ್ಕೆ ಆಗಮಿಸಿದ್ದಾರೆ ಎಂದು ಗರ್ಭಿಣಿಯರು ಆರೋಪಿಸಿದ್ದಾರೆ.   

ಜೊತೆಗೆ ಪಕ್ಕದ ಕೊಠಡಿಯಲ್ಲಿವುದು ಸ್ಕ್ಯಾನಿಂಗ್ ಕೊಠಡಿ ಸಂಖ್ಯೆ 11 ರಲ್ಲಿ ಕೂಡ ಇದೇ ರೀತಿಯ ಸ್ಥಿತಿ ಕಂಡು ಬಂದಿತ್ತು. ವೈದ್ಯರು 10:30 ರ ನಂತರೆ ಪ್ರತಿನಿತ್ಯ ಡ್ಯೂಟಿಗೆ ಹಾಜರಾಗುವುದು ಎಂಬ ದೂರಿದೆ.ಈ  ಬಗ್ಗೆ ಆಸ್ಪತ್ರೆಯ ಕೌಂಟರ್ ನಲ್ಲಿ ವಿಚಾರಿಸಿದಾಗ ಅವರು ಮಂಗಳೂರಿನಿಂದ ಬರುವುದು ಅದಕ್ಕೆ ತಡವಾಗುತ್ತದೆ ಅಂತ ಊಡಾಫೆ ಉತ್ತರ ನೀಡುತ್ತಾರೆ‌ ಎಂದು ಆರೋಪ ಕೇಳಿಬಂದಿದೆ‌.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಬಗ್ಗೆ ಹಲವು ಆರೋಪಗಳು ಈ ಹಿಂದೆ ಕೂಡ ಕೇಳಿ ಬಂದಿತ್ತು. ಈ ಬಗ್ಗೆ ಮುಂದಕ್ಕಾದರೂ ಸರಕಾರಿ ಆಸ್ಪತ್ರೆಯ ರಕ್ಷಾ ಕಮಿಟಿ ಸದಸ್ಯರು ಹಾಗೂ ಬೆಳ್ತಂಗಡಿ ಶಾಸಕರು  ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment