Posts

ಗುರುವಾರ ಕಾಜೂರಿಗೆ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್

0 min read

 


ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಮುಬಾರಕ್ ಫೆ. 19 ರಂದು ಆರಂಭಗೊಂಡಿದ್ದು, ಫೆ.‌25  ಅಧ್ಯಾತ್ಮಿಕ ಅನುಭೂತಿಯ ಬೃಹತ್ ದಿಕ್ರ್ ಮಜ್ಲಿಸ್‌ಗೆ ಪ್ರಧಾನ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ‌ ಉಸ್ತಾದ್ ಆಗಮಿಸಲಿದ್ದಾರೆ.

ಖಾಝಿ, ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್‌ ದಿಕ್ರ್  ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.ಅನೇಕ‌ ಮಂದಿ ಸಯ್ಯಿದರುಗಳು, ವಿದ್ವಾಂಸರುಗಳು ಪಾಲುಗೊಳ್ಳಲಿದ್ದಾರೆ. 

ಧಾರ್ಮಿಕ ಉಪನ್ಯಾಸ ನಡೆಯುತ್ತಿದ್ದು, ಪೇರೋಡ್ ಉಸ್ತಾದ್, ಶಾಫಿ‌ ಸ‌ಅದಿ, ಝೈನಿ ಕಾಮಿಲ್ ಸಖಾಫಿ‌ ಮೊದಲಾದವರು ಆಗಮಿಸಲಿದ್ದಾರೆ.

ಸರ್ವ ಧರ್ಮೀಯ ಸಭೆಯಲ್ಲಿ ಶಾಸಕರುಗಳು ಸಹಿತ ಗಣ್ಯರುಗಳು ಭಾಗವಹಿಸಲಿದ್ದಾರೆ.

ಸಯ್ಯಿದ್ ಕುಂಬೋಳ್‌ ತಂಙಳ್, ಸಯ್ಯಿದ್ ಕೂರತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದಲ್ಲಿ ಫೆ. 28 ರಂದು ಈ‌ ವರ್ಷದ ಉರೂಸ್ ಸಮಾರೋಪ ಜರುಗಲಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment