Posts

ಮಾನವೀಯ ಕಾರುಣ್ಯ ಚಟುವಟಿಕೆಗಳಲ್ಲಿ ಎಸ್ ಕೆ ಎಸ್ ಎಸ್ ಎಫ್ ವಿಖಾಯ ದ ಸೇವೆ ಶ್ಲಾಘನೀಯ ದ ಕ ಖಾಝಿ ತ್ವಾಖಾ ಉಸ್ತಾದ್

1 min read

ಚಿತ್ರ ಶಿರ್ಷಿಕೆ; ಜಿಲ್ಲಾ ಖಾಝಿ ತ್ವಾಖಾ ಉಸ್ತಾದರನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿ; ಚಾರ್ಮಾಡಿ ಭಾಗದಲ್ಲಿ ಅಕಾಲಿಕ ಮಳೆ‌ ಮತ್ತು ಪ್ರವಾಹ ಸೃಷ್ಟಿಯಾದಾಗ  ಹಾಗೂ ಇನ್ನೂ ಅನೇಕ ಕಡೆ ತುರ್ತು ಸಂದರ್ಭದಲ್ಲಿ ನೆರವಾಗುವ ಮೂಲಕ ಸೇವಾ ಕ್ಷೇತ್ರದಲ್ಲಿ ಪ್ರಸಿದ್ದಿ ಲಡೆದಿರುವ ಎಸ್‌ಕೆಎಸ್ಸೆಸ್ಸೆಫ್ ವಿಖಾಯ ಇದರ ಸೇವಾ ಕಾರ್ಯ ಶ್ಲಾಘನೀಯ.ಇದನ್ನು ವಿಸ್ತಾರಗೊಳಿಸಲು ನೂತನ ಆಂಬುಲೆನ್ಸ್‌ ವಾಹನ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದು‌ ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರೂ‌ ಆಗಿರುವ ದ.ಕ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಹೇಳಿದರು.

ಮುಹ್ಯುದ್ದೀನ್ ಜುಮಾ ಮಸ್ಜಿದ್ ಕಕ್ಕಿಂಜೆ ಎಸ್‌ಕೆಎಸ್ಸೆಸ್ಸೆಫ್ ಕಕ್ಕಿಂಜೆ ಶಾಖೆ ವತಿಯಿಂದ ಫೆ.17 ಎಂದು ಕಕ್ಕಿಂಜೆ ಯಲ್ಲಿ ನಡೆದ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರ್ ಕಾರ್ಯಕ್ರಮ‌ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.



ಮುಸ್ಲಿಂ ಸಮುದಾಯ ಶೈಕ್ಷಣಿಕ ವಾಗಿ ಮೇಲೇರುತ್ತಿದ್ದು, ತಾಂತ್ರಿಕ  ಮತ್ತು ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕಾಗಿದೆ. ಅಂತಹಾ ಅವಕಾಶವನ್ನು ಕಾಶಿಪಟ್ಣ ದಾರುನ್ನೂರು ವಿದ್ಯಾ ಸಂಸ್ಥೆ ಯಲ್ಲಿ ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದರು.


ಅಧ್ಯಕ್ಷತೆಯನ್ನು ಕಕ್ಕಿಂಜೆ ಮಸ್ಜಿದ್ ಅಧ್ಯಕ್ಷ ಅರೆಕ್ಕಲ್‌ ಮಮ್ಮಿಕುಂಞಿ ವಹಿಸಿದ್ದರು.

ಕಕ್ಕಿಂಜೆ ಮುದರ್ರಿಸ್ ಸಂಶುದ್ದೀನ್ ಅಶ್ರಫಿ ಪ್ರಸ್ತಾವನೆಗೈದರು. ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಅಲ್‌ ಖಾಸಿಮಿ ಪತ್ತನಾಪುರಂ ಮುಖ್ಯಪ್ರಭಾಷಣ ನಡೆಸಿದರು.

ಐ.ಕೆ ಮೂಸಾ ದಾರಿಮಿ ದುಆ ನೆರವೇರಿಸಿದರು. ರಶೀದ್ ಜಲಾಲಿ ಕಿರಾಅತ್ ಪಠಿಸಿದರು.

ಫೆ. 18 ರಂದು ಅನುಸ್ಮರಣೆ ಮತ್ತು ಮಜ್ಲಿಸುನ್ನೂರ್ ನಡೆಯಿತು.

ಖಲಂದರಿಯಾ ಯತೀಂಖಾನಾ ಪ್ರಾಚಾರ್ಯ ಹಂಝ ಮುಸ್ಲಿಯಾರ್  ದುಆ ನೆರವೇರಿಸಿದರು.

ಎಸ್‌ಕೆಎಸ್ಸೆಸ್ಸೆಫ್ ಕಕ್ಕಿಂಜೆ ಶಾಖೆ ಅಧ್ಯಕ್ಷ ಸ್ವದಕತುಲ್ಲಾ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಪ್ರಭಾಷಣವನ್ನು ಮೂಸಾ ದಾರಿಮಿ ಮತ್ತು ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ನಡೆಸಿದರು. ಮುಹಮ್ಮದ್ ರಫೀಕ್ ಮುಸ್ಲಿಯಾರ್ ಕಡಂಬು ಪ್ರಸ್ತಾವನೆಗೈದರು. ಮಜ್ಲಿಸುನ್ನೂರ್ ನೇತೃತ್ವವನ್ನು ಸಯ್ಯಿದ್ ಅಲೀ ತಂಙಳ್ ಕುಂಬೋಳ್ ವಹಿಸಿದ್ದರು.

ಸಮಾರಂಭದಲ್ಲಿ ಅಬ್ದುರ್ರಝಾಕ್ ಹಾಜಿ ಕಾಶಿಪಟ್ಣ,‌‌ಹನೀಫ್ ಹಾಜಿ ಮಂಗಳೂರು,ಸಮದ್ ಹಾಜಿ,ಫಕೀರಬ್ಬ ಮಾಸ್ಟರ್, ಅಬ್ದುರ್ರಝಾಕ್ ಕನ್ನಡಿಕಟ್ಟೆ, ಅಬ್ದುಲ್ಲ ಹಾಜಿ,ಜಮಾಅತ್ ಕಾರ್ಯದರ್ಶಿ ರಶೀದ್ ಬಾರಿದ್,ರಿಯಾಝ್ ಫೈಝಿ, ಕೆ.ಎ ರಹಿಮಾನ್ ಕತ್ತರಿಗುಡ್ಡೆ, ದಾವೂದ್ ಬೋಂಟ್ರಪಾಲ್, ಪಿ.ಕೆ ಇಬ್ರಾಹಿಂ ಕೋಣೆ, ಶಂಶುದ್ದೀನ್ ದಾರಿಮಿ, ಯಾಸರ್ ಚಿಬಿದ್ರೆ, ಅಶ್ರಫ್ ಆಲಿಕುಂಞಿ ಮುಂಡಾಜೆ, ಇಲ್ಯಾಸ್ ಅಹಮ್ಮದ್‌ ಕಕ್ಕಿಂಜೆ, ಇಬ್ರಾಹಿಂ ಫೈಝಿ ದರ್ಖಾಸು, ಶಕೀಲ್ ಅರೆಕ್ಕಲ್,ಝುಬೈರ್ ಬಂಡಸಾಲೆ,ಮಾಲಿಕ್ ಅಝೀಝ್,ಸಾಜಿದ್ ಎಚ್ ಎ,ಹಾಶಿಂ ಫೈಝಿ,ಹಕೀಂ ಬಂಗೇರುಕಟ್ಟೆ,ಶಾಫಿ ಇರ್ಫಾನಿ,ಮುರ್ಶಿದ್ ಫೈಝಿ ಅಡ್ವಕೇಟ್ ನವಾಝ್ ಅರೆಕ್ಕಲ್, ನಾಸಿರ್ ಕಲ್ಲಗುಡ್ಡೆ,ಇಂರಾನ್ ಕಕ್ಕಿಂಜೆ ಮೊದಲಾದ ಅನೇಕ ಗಣ್ಯರು ಉಪಸ್ಥಿತರಿದ್ದರು.

ಎಸ್‌ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯಾಧ್ಯಕ್ಷ ನಝೀರ್ ಅಝ್‌ಹರಿ ಬೊಳ್ಮಿನಾರ್ ಸ್ವಾಗತಿಸಿದರು.

ಯಾಸರ್ ಉಮರ್ ಕಾರ್ಯಕ್ರಮ ನಿರೂಪಿಸಿ 

ಸಿರಾಜ್ ಅರೆಕ್ಕಲ್ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment