ಬೆಳ್ತಂಗಡಿ; ಚೆನ್ನೈನಲ್ಲಿ ನ.22, 23 ರಂದು ನಡೆದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್‌ಡಿಪಿಐ ಇದರ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನದಲ್ಲಿ ಆಲ್ಫೋನ್ಸ್ ಫ್ರಾಂಕೋ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಗೆ ಇರುವ ಈ ರಾಷ್ಟ್ರೀಯ ಸಂಪುಟದಲ್ಲಿ ಕರ್ನಾಟಕದಿಂದ ಮೂರು ಮಂದಿ ಮಾತ್ರ ಕಾರ್ಯಕಾರಿ ಮಂಡಳಿಯಲ್ಲಿ ಅವಕಾಶ ಪಡೆದಿದ್ದು, ಆ ಪೈಕಿ ಅಲ್ಫೋನ್ಸ್ ಫ್ರಾಂಕೋ ಒಬ್ಬರಾಗಿದ್ದಾರೆ.
ಈ ಹಿಂದಿನ ಮೂರು ವರ್ಷದ ಒಂದು ಅವಧಿಯನ್ನು ಅವರು ಯಶಸ್ವಿಯಾಗಿ ಪೂರೈಸಿ ಪಕ್ಷ ಸಂಘಟನೆ ಮತ್ತು ರಾಷ್ಟ್ರೀಯ ಸೆಮಿನಾರ್ ಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ರಾಷ್ಟ್ರ ನಾಯಕರ ಗಮನಸೆಳೆದಿದ್ದರು.
ಅಲ್ಫೋನ್ಸ್ ಫ್ರಾಂಕೋ ಅವರು ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಇದರ ಆಡಳಿತ ಪಾಲುದಾರರಾಗಿದ್ದಾರೆ.
ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಸಲಹಾ ಸಮಿತಿ ಸದಸ್ಯರಾಗಿ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯರಾಗಿ, ರಾಷ್ಟ್ರ ಧ್ವಜದ ರಾಜ್ಯ ತರಬೇತುದಾರರಾಗಿ ಪರಿಚಿತರಾಗಿದ್ದಾರೆ.
ಜೊತೆಗೆ ಎಸ್‌ಡಿಪಿಐ ಪಕ್ಷದ ಭಟ್ಕಳ ಹಾಗೂ ಶಿರ್ಷಿ ಇಲ್ಲಿನ ಉಸ್ತುವಾರಿಯಾಗಿಯೂ ನೇಮಕಗೊಂಡಿದ್ದಾರೆ.