Posts

ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಆದ್ಯತೆ; ಡಾ.ಎಂ.ಪಿ ಶ್ರೀನಾಥ್ ಉಜಿರೆ ಈಜುಕೊಳದ ಸ್ನೇಹಬಂಧುಗಳಿಂದ ಮೊದಲ‌ ಸನ್ಮಾನ

0 min read


ಬೆಳ್ತಂಗಡಿ; ಹಿರಿಯರ ಮಾರ್ಗದರ್ಶನ, ಕಿರಿಯರ ಪ್ರೋತ್ಸಾಹ, ಜಿಲ್ಲಾ ಸಾಹಿತ್ಯಾಭಿಮಾನಿಗಳ ಸಹಕಾರದಿಂದ ಜಿಲ್ಲಾ ಕಸಾಪ ಚುನಾವಣೆಯಲ್ಲಿ ನನಗೆ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ಚುನಾವಣಾ ಪೂರ್ವವಾಗಿ ಭರವಸೆ ನೀಡಿರುವಂತೆ

ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮುಖಾಂತರ ಪ್ರತಿ ಮನೆಮನೆಗೆ ಸಾಹಿತ್ಯದ ಕಂಪು ಪಸರಿಸುವ ಕಡೆ ನನ್ನ ಒಲವು ನೀಡಲಿದ್ದೇನೆ ಎಂದು ಕಸಾಪ‌ ಚುನಾಯಿತ ಜಿಲ್ಲಾಧ್ಯಕ್ಷ, ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಪಿ ಶ್ರೀನಾಥ್ ಹೇಳಿದರು.

ಅವರು ಉಜಿರೆಯ ಈಜುಕೊಳದ ಸ್ನೇಹ ಬಂಧುಗಳು ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ‌‌ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಕನ್ನಡದ ಕಂಪು ಪಸರಿಸಲು, ಕನ್ನಡ ತೇರು ಮನೆಮನೆಗೆ ಒಯ್ಯಲು ತಮ್ಮೆಲ್ಲರ ಸಹಕಾರ ಅತಿ ಅಗತ್ಯವಾಗಿದೆ.

ಇಂದು ತಾವೆಲ್ಲರೂ ಸೇರಿ ನನಗೆ ಸಲ್ಲಿಸಿರುವ ಈ ಗೌರವ ಸಾಹಿತ್ಯಕ್ಷೇತ್ರಕ್ಕೆ ಸಂದ ಗೌರವ ಎಂದರು.ಈಜುಕೊಳದ ಎಲ್ಲಾ ಸ್ನೇಹಿತರು ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.

ಧರಣೇಂದ್ರ ಕೆ ಜೈನ್ ನಿರೂಪಿಸಿದರು. ರಘುರಾಮ ಶೆಟ್ಟಿ ಧನ್ಯವಾದ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment