Posts

ಎರಡು ಮೃತದೇಹಗಳನ್ನು ಅಂತ್ಯಸಂಸ್ಕಾರ‌ ನೆರವೇರಿಸಿದ ಮಾನವ ಸ್ಪಂದನ ಮತ್ತು ಚರ್ಚ್ ಟಾಸ್ಕ್‌ಪೋರ್ಸ್ ತಂಡ

1 min read

ಬೆಳ್ತಂಗಡಿ; ಕೋವಿಡ್ ನಿಂದ ಮೃತಪಟ್ಟ ನಾರಾವಿ ಗ್ರಾಮದ ಅರಸಿಕಟ್ಟೆ- ಕುತ್ಲೂರು‌ ನಿವಾಸಿಗಳಿಬ್ಬರು ಮಹಿಳೆಯರ  ಅಂತ್ಯಸಂಸ್ಕಾರವನ್ನು ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡ‌ ಮತ್ತು ಸೈಂಟ್ ಜೋಸೆಫ್ ಚರ್ಚ್ ಕುತ್ಲೂರು ಇಲ್ಲಿನ  ಟಾಸ್ಕ್ ಫೋರ್ಸ್ ತಂಡ ಜಂಟಿಯಾಗಿ  ನೆರವೇರಿಸಿತು.


ಕುತ್ಲೂರು ನಿವಾಸಿ ಮಾಜಿ‌ ಸೈನಿಕ‌ ಜೇಮ್ಸ್ ಅರುಪರ ಅವರ ಪತ್ನಿ, ಸ್ವಗೃಹದಲ್ಲಿ ಮೃತರಾದ ಮರಿಯಮ್ಮ‌ ಜೇಮ್ಸ್ ಮತ್ತು ಅರಸಿಕಟ್ಟೆ ನಿವಾಸಿ ಸಂಜೀವ ಪ್ರಭು ಅವರ ಪತ್ನಿ, ಮಂಗಳೂರು ಆಸ್ಪತ್ರೆಯಲ್ಲಿ ಮೃತರಾದ ವಸುಧಾ ಪ್ರಭು(71ವ.) ಅವರ ಅಂತ್ಯಸಂಸ್ಕಾರವನ್ನು ಮೃತರ ಕುಟುಂಬಸ್ತರ ಕೋರಿಕೆ ಮೇರೆಗೆ ಶುಕ್ರವಾರ ಅವರವರ ಧರ್ಮ ಸಂಪ್ರದಾಯದ‌ ಪ್ರಕಾರ ಜಂಟಿ ತಂಡ ನಡೆಸಿಕೊಟ್ಟಿತು. 

ಮರಿಯಮ್ಮ ಅವರ ಮೃತದೇಹಕ್ಕೆ ಕುತ್ಲೂರು ಚರ್ಚ್‌ನ ಧರ್ಮಗುರುಗಳಾದ ಫಾ. ದಿಲೀಪ್ ವೆಳ್ಳಚಾಲಿಲ್, ಫಾ.‌ ಫ್ರಾನ್ಸಿಸ್ ಓಡಂಪಳ್ಳಿಲ್ ಮತ್ತು ಬೆಳ್ತಂಗಡಿ ಧರ್ಮಪ್ರಾಂತ್ಯದ ಕಾರ್ಯಪಡೆ ಸಂಯೋಜಕ ಫಾ. ಬಿನೊಯ್ ಎ.ಜೆ ಧಾರ್ಮಿಕ ವಿಧಿ ನೆರವೇರಿಸಿದರು. 

ಮಾನವ ಸ್ಪಂದನ ತಂಡದ ಚೆರ್ಮೆನ್ ಪಿ.ಸಿ‌ ಸೆಬಾಸ್ಟಿಯನ್, ಸದಸ್ಯ ಜೈಸನ್ ವೆರ್ಣೂರು, ಕೋವಿಡ್ ಸೋಲ್ಜರ್ಸ್ ತಂಡದ  ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಂಡದ ಕಾರ್ಯಕರ್ತರಾದ ರಂಜಿತ್ ಅಮ್ಮಿನಡ್ಕ, ವಿನೋದ್, ಕುರಿಯನ್ ತಿರುತನತ್ತಿಲ್, ಶಾಜಿ ಪಯ್ಯಪಳ್ಳಿ,  ಇವರು ಸ್ವಯಂ‌ಸೇವಕರಾಗಿ ಭಾಗಿಯಾಗಿದ್ದರು.

ಎರಡೂ ಅಂತ್ಯಸಂಸ್ಕಾರಕ್ಕೂ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.‌ದೀಕ್ಷಿತಾ, ಕಿರಿಯ ಆರೋಗ್ಯ ಸಹಾಯಕಿಯರಾದ ಶಕುಂತಲಾ‌ ಮತ್ತು ಉಷಾ, ಸಿಬ್ಬಂದಿ ಸುಕೇಶ್ ಮಾರ್ಗದರ್ಶನ ನೀಡಿದರು.

ಮಂಗಳೂರು ಆಸ್ಪತ್ರೆಯಲ್ಲಿ ಗುರುವಾರ ಮೃತರಾಗಿದ್ದ ವಸುಧಾ ಪ್ರಭು ಅವರ ಮೃತದೇಹವನ್ನು ಮಂಗಳೂರು ಹಿಂದೂ ಯುವ ಸೇನೆ ಆಂಬುಲೆನ್ಸ್‌ ಮೂಲಕ  ಮನೆಗೆ ತರಲಾಗಿತ್ತು, ಅಂತ್ಯಸಂಸ್ಕಾರದ ವೇಳೆ‌ ಮೃತರ ಪುತ್ರರಾದ ಮಹೇಶ್ ಪ್ರಭು ಮತ್ತು ಮಧುಕರ ಪ್ರಭು ವಿಧಿ‌ ನಡೆಸಿದರು. ಮರಿಯಮ್ಮ ಅವರ ಮನೆಯಲ್ಲಿ ಮೃತದೇಹವನ್ನು ಅಂತಿಮ ಯಾತ್ರೆ ಪೆಟ್ಟಿಗೆಯಲ್ಲಿ ಸಿದ್ಧಪಡಿಸುವಲ್ಲಿ ನಾರಾವಿ  ವೈದ್ಯಾಧಿಕಾರಿ ಡಾ.‌ದೀಕ್ಷಿತಾ ನೇತೃತ್ವದಲ್ಲಿ ರಾಜಕೇಸರಿ ತಂಡದ ದೀಪಕ್ ಜಿ, ಕಾರ್ತಿಕ್, ಲೋಹಿತ್ ಸೇವೆ ನೀಡಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment