ಬೆಳ್ತಂಗಡಿ: ಕುತ್ಲೂರು ಗ್ರಾಮದ ಉರ್ಣಾಜೆ ಎಂಬಲ್ಲಿ ಹರಿಯಪ್ಪ ಪೂಜಾರಿ ಮತ್ತು ಶ್ರೀಮತಿ ದಂಪತಿ ಕುಟುಂಬ ತೀರಾ ಬಡತನದಲ್ಲಿ ಜೀವನ ನಡೆಸುತ್ತಿದ್ದು ವಾಸಿಸಲು ಯೋಗ್ಯ ಮನೆಯೂ ಇಲ್ಲದಂತಹ ಪರಿಸ್ಥಿತಿ ಉಂಟಾಗಿತ್ತು .ಇದನ್ನು ತಿಳಿದ ಯುವ ಕಾಂಗ್ರೆಸ್ ಕುತ್ಲೂರು ಕಾರ್ಯಕರ್ತರು ರವಿವಾರ ಸ್ಥಳಕ್ಕೆ ಧಾವಿಸಿ ಶ್ರಮಾದಾನದ ಮೂಲಕ ಮನೆ ಕಟ್ಟಿಕೊಡುವ ಕೆಲಸಕ್ಕೆ ಇಳಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ,ಹೈಕೋರ್ಟ್ ನ್ಯಾಯವಾದಿಯೂ ಆಗಿರುವ ಯುವ ನಾಯಕ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಎಐಸಿಸಿ ವಕ್ತಾರೆ ಲಾವಣ್ಯ ಬಲ್ಲಾಳ್, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ,ಮಾದ್ಯಮ ಸಂಯೋಜಕ ಸಂದೀಪ್ ನಿರಲ್ಕೇ ಮುಂತಾದ ಮುಖಂಡರು ಭೇಟಿ ನೀಡಿ ಬಡ ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ನಾರಾವಿ ಗ್ರಾ. ಪಂ. ಸದಸ್ಯ ರವೀಂದ್ರ ಬಾಂದೊಟ್ಟು, ನಾರಾವಿ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿವಾಕರ ಭಂಡಾರಿ,ನಾರಾವಿ ಗ್ರಾ. ಪಂ. ಸದಸ್ಯೆ ಯಶೋದಾ, ಮಾಜಿ ಸದಸ್ಯರುಗಳಾದ ಕೃಷ್ಣಪ್ಪ ಪೂಜಾರಿ, ಸಂತೋಷ್ ಕಾಂತಬೆಟ್ಟು ,ಅನಿಲ್ ರೋಷನ್,ಹಾಗೂ ಕುತ್ಲೂರು ಅರಣ್ಯ ಸಮಿತಿಯ ಅಧ್ಯಕ್ಷ ಶ್ರೀಧರ ಪೂಜಾರಿ ಹಲೆಕ್ಕಿ ,ನಾರಾವಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಲಿಂಗಪ್ಪ ಮಲೆಕುಡಿಯ , ಕುಂಭಕಂಟಿನಿ ಫ್ರೆಂಡ್ಸ್ ಕ್ಲಬ್ ಕುತ್ಲೂರು ಇದರ ಮಾಜಿ ಅಧ್ಯಕ್ಷ ರೋಹನ್ ಅಯೋದ್ಯವನ, ಹಾಲಿ ಅಧ್ಯಕ್ಷ ಅಭಿಜಿತ್ ಜೈನ್ , ನಾರಾವಿ ವಲಯ ಕಾಂಗ್ರೇಸ್ ಮಾಜಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ, ಕುತ್ಲೂರು ಬಿಲ್ಲವ ಸಂಘದ ಅಧ್ಯಕ್ಷ ನಿತ್ಯಾನಂದ ಪೂಜಾರಿ, ಹಿರಿಯ ಮುಖಂಡರಾದ ಟಿ.ಎಸ್ ಸಲೀಂ, ವಸಂತ ಗುಣನಿಲ ನಾರಾವಿ, ಬೋಜ ಪೂಜಾರಿ ಹೊಸಮನೆ,ಚಂದ್ರ ಭಟ್ ಪೂಂಜಾಜೆ,ಪ್ರಸಾದ್ ಭಟ್ ಪೂಂಜಾಜೆ, ಚೆನ್ನಕೇಶವ ,ರಾಜು ವಿಶಾಲ್ ಡ್ರೈವರ್,ಮಧುಸೂದನ್ ಮಾಬೇಟ್ಟು, ಶೇಖರ ಕುತ್ಲೂರು ಹಾಗೂ ಕುತ್ಲೂರು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.