Posts

ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿಯಿಂದ 105 ಕುಟುಂಬಗಳಿಗೆ ಈದ್ ಕಿಟ್ ವಿತರಣೆ

1 min read

ಬೆಳ್ತಂಗಡಿ; ಮುಸ್ಲಿಂ ಸಮುದಾಯದ ಸಮಗ್ರ ಏಳಿಗೆ, ರಾಜಕೀಯ- ಸಾಮಾಜಿಕ ಜಾಗೃತಿ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಹಾಯಿಯಾಗಿ ರಾಜ್ಯಾದ್ಯಂತ ಕೆಲಸ‌ ಮಾಡುತ್ತಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಇದರ ವತಿಯಿಂದ ಹಾಗೂ ದಾನಿಗಳ ಸಹಕಾರದಿಂದ 105 ಕುಟುಂಬಗಳಿಗೆ ರಂಝಾನ್ ಈದುಲ್‌ ಫಿತರ್ ಹಬ್ಬದ ಪರವಾಗಿ ಆಹಾರ ಸಾಮಾಗ್ರಿಗಳ‌‌ ಕಿಟ್ ವಿತರಣೆ ಮಂಗಳವಾರ ನಡೆಯಿತು.

ಬೆಳ್ತಂಗಡಿ ಕೋರ್ಟ್ ರಸ್ತೆಯ ಜಾಮಿಯಾ ಮಸ್ಜಿದ್ ವಠಾರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ ವಹಿಸಿದ್ದರು.

ರಾಜ್ಯ ಸಮಿತಿಯ ಸದಸ್ಯ ಸಾದಿಕ್ ಮಾಸ್ಟರ್ ಮಲೆಬೆಟ್ಟು, ತಾ. ಉಪಾಧ್ಯಕ್ಷರಾದ ಸಯ್ಯಿದ್ ಹಬೀಬ್ ಸಾಹೇಬ್‌ ಮಂಜೊಟ್ಟಿ‌ ಮತ್ತು ಅಬ್ಬೋನು ಮದ್ದಡ್ಕ, ಕೋಶಾಧಿಕಾರಿ ಅಹಮ್ಮದ್ ಎ.ಕೆ, ತಾ. ಸಹ ಕಾರ್ಯದರ್ಶಿ ಮುಹ್ಯುದ್ದೀನ್ ಉಜಿರೆ, ಮಾಧ್ಯಮ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ, ವಿವಿಧ ಬ್ಲಾಕ್‌ಗಳ ಅಧ್ಯಕ್ಷರುಗಳಾದ ಉಸ್ಮಾನ್ ಹಾಜಿ‌ ಆಲಂದಿಲ (ಕುವೆಟ್ಟು), ಝಾಕಿರ್‌ ಹುಸೈನ್ (ಕಣಿಯೂರು), ತಲ್ಹತ್ ಎಂ.ಜಿ‌ (ಅಳದಂಗಡಿ), ಆದಂ‌ ಸಾಹೇಬ್ (ಲಾಯಿಲ), ಸಂಘಟನಾ  ಪ್ರಮುಖರಾದ ಜಮಾಲ್ ಲೆತೀಫಿ, ರಶೀದ್ ಬಲಿಪಾಯ, ಉಮರ್ ಜಿ.ಕೆ ಗುರುವಾಯನಕೆರೆ ಇವರು ಭಾಗಿಯಾಗಿದ್ದರು.

ಸಂಘಟನೆಯ 7 ಬ್ಲಾಕ್ ಸಮಿತಿಗಳಿಗೆ ವಿಂಗಡಿಸಿ ಕಿಟ್ ಗಳನ್ನು ಒದಗಿಸಿಕೊಡಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment