ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ಮೇ.10 ರಂದು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಜನತಾ ಕಾಲೋನಿಯಲ್ಲಿ ಅತೀ ಹೆಚ್ಚು ಕೊರೋನಾ ಪಾಸಿಟಿವ್ ಇದ್ದು ಈ ಪ್ರದೇಶವನ್ನು ಸೀಲ್ ಡೌನ್ ಮಾಡಲು ತೀಮಾ೯ನಿಸಲಾಯಿತು. ಜನಸಾಮಾನ್ಯರಿಗೆ ತುರ್ತು ಅವಶ್ಯಕತೆ ಇದ್ದರೆ ಹಾಗೂ ಅಗತ್ಯ ವಸ್ತುಗಳಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ಹಾಗೂ ಸಿಬ್ಬಂದಿ ವರ್ಗವನ್ನು ಸಂಪರ್ಕಿಸುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಯಿತು. ತುರ್ತು ಅವಶ್ಯಕತೆಗಳಿಗೆ ಸಂಘ ಸಂಸ್ಥೆಯವರು ಸೇವಾ ಮನೋಬಾವದಿಂದ ಸಹಕರಿಸುವುದಾದರೆ ನೇರವಾಗಿ ಗ್ರಾಮ ಪಂಚಾಯತ್ ಮೂಲಕವೇ ಸಹಕರಿಸಬೇಕು. ಸಾರ್ವಜನಿಕರಿಗೆ ಪ್ರವೇಶ ನಿಬ೯೦ಧಿಸಿದೆ.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಗತ್ಯವಾಗಿ ವಾಹನಗಳ ಮೂಲಕ ತಿರುಗಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮ ಬೀಟ್ ಪೋಲಿಸರಿಗೆ ತಿಳಿಸಲಾಯಿತು. ಸಮಿತಿ ಸಭೆಯ ನಂತರ ಮಾವಿನಕಟ್ಟೆ ಪ್ರದೇಶಕ್ಕೆ ಬೇಟಿ ನೀಡಿ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಯಿತು. ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಪಾಸಿಟಿವ್ ಇದ್ದ ಮನೆಗಳಿಗೆ ಬೇಟಿ ನೀಡಿ ಮನೆಯವರಿಗೆ ಆರೋಗ್ಯ ವಿಚಾರಿಸಿ ದೈರ್ಯ ತುಂಬಲಾಯಿತು. ಹದಿನಾಲ್ಕು ದಿನಗಳ ಕಾಲ ಯಾರೂ ಮನೆಯಿಂದ ಹೊರಬಾರದೆಂದು ತಿಳಿಸಲಾಯಿತು.
ಗ್ರಾ .ಪಂ.ಅಧ್ಯಕ್ಷೆ ಸುಭಾಶಿನಿ ಜನಾರ್ದನ ಗೌಡ .ಕೆ . ಉಪಾದ್ಯಕ್ಷೆ ಕುಸುಮ ಎನ್ ಬಂಗೇರ, ಸದಸ್ಯರಾದ ಸುದಾಕರ ಮಜಲು. ಕೆ.ಎಂ.ಅಬ್ದುಲ್ ಕರೀಮ್, ವಿಜಯ ಗೌಡ ಕೆ, ಲತೀಫ್ ಪರಿಮ, ಯಶೋದರ ಶೆಟ್ಟಿ, ಮೋಹಿನಿ, ಮರೀಟಾ ಪಿಂಟೋ, ಇಂದಿರಾ, ಪುಷ್ಪಾ ನಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್, ಗ್ರಾಮ ಬೀಟ್ ಪೋಲಿಸ್ ವೆಂಕಪ್ಪ, ಗ್ರಾ.ಪಂ ಕಾರ್ಯದರ್ಶಿ ಕುಂಞ್ಞ.ಕೆ, ಸಿಬ್ಬಂದಿಗಳಾದ ಸುರೇಶ್ ಹಾಗೂ ರವಿ ಎಚ್., ರಾಜೇಶ್ ಪೆಂರ್ಬುಡ ಮೊದಲಾದವರು ಉಪಸ್ಥಿತರಿದ್ದರು.